ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್‌ಗೆ 12 ಲಕ್ಷ ರೂ. ದಂಡ

0

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್ 6) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 57 ರನ್‌ಗಳ ಹೀನಾಯ ಸೋಲುನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಆರ್‌ಆರ್ ನಾಯಕ ಸ್ಟೀವ್ ಸ್ಮಿತ್‌ಗೆ ದಂಡದ ಬರೆಯೂ ಬಿದ್ದಿದೆ.

ಐಪಿಎಲ್‌ 20ನೇ ಪಂದ್ಯದಲ್ಲಿ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಲೋ ಓವರ್‌ ರೇಟ್‌ಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್‌ಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಸತತ 3 ಸೋಲುಗಳಿಂದ ಕಂಗೆಟ್ಟಿರುವ ಆರ್‌ಆರ್‌ ಕ್ಯಾಪ್ಟನ್‌ಗೆ ದಂಡದ ಸಂಕಟವೂ ಎದುರಾಗಿದೆ.

ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್ 79 (47 ಎಸೆತ), ಕ್ವಿಂಟನ್ ಡಿ ಕಾಕ್ 23, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 17, ಹಾರ್ದಿಕ್ ಪಾಂಡ್ಯ 30 (19) ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ನೀರಸ ಬ್ಯಾಟಿಂಗ್ ನೀಡಿತು. ಜೋಸ್ ಬಟ್ಲರ್ 70 (44), ಟಾಮ್ ಕರನ್ 15, ಮಹಿಪಾಲ್ ಲಾಮ್ರರ್ 11, ಜೋಫ್ರಾ ಆರ್ಚರ್ 24 ರನ್‌ ಕೊಡುಗೆಯೊಂದಿಗೆ 18.1ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 136 ರನ್ ಬಾರಿಸಿ ಶರಣಾಯಿತು. ಈ ಸೋಲಿನೊಂದಿಗೆ ರಾಜಸ್ಥಾನ್ ತಂಡ ಆಡಿರುವ 5 ಪಂದ್ಯಗಳಲ್ಲಿ ಸತತ 3 ಪಂದ್ಯ ಸೋತಂತಾಗಿದೆ.

LEAVE A REPLY

Please enter your comment!
Please enter your name here