ರಾಜ್ಯಕ್ಕೆ 3ನೇ ರ್ಯಾಂಕ ಪಡೆದ ವಿದ್ಯಾರ್ಥಿನಿ ಅಕ್ಷತಾ ರಾಠೋಡಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಅಭಿನಂದಿಸಲಾಯಿತು.

0

ರಾಜ್ಯಕ್ಕೆ 3ನೇ ರ್ಯಾಂಕ ಪಡೆದ ವಿದ್ಯಾರ್ಥಿನಿ ಅಕ್ಷತಾ ರಾಠೋಡಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಅಭಿನಂದಿಸಲಾಯಿತು.


ಸಾಧನೆ ಎಂಬುದು ಪರರ ಸ್ವತ್ತಲ್ಲ ಪ್ರತಿಯೊಬ್ಬರು ಸತತ ಪರಿಶ್ರಮದಿಂದ ಅಭ್ಯಾಸ ಹಾಗೂ ಗುರುಗಳ ಮಾರ್ಗದರ್ಶನ ಪಡೆದುಕೊಂಡರೆ ಸಾಧನೆ ಮಾಡಲು ಸಾಧ್ಯ ತಾಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದದ್ದೂಕ್ಕು ಕೊಂಡ್ಯೋಯ್ದು ಇತಿಹಾಸದ ಪುಟದಲ್ಲಿ ಉಳಿಸಿದ್ದಾಳೆ ಎಂದು ವಿಶ್ವ ಹಿಂದೂಪರಿಷತ್ತಿನ ಜಿಲ್ಲಾ ಉಪಾದ್ಯಕ್ಷ ಮುತ್ತು ಶಾಬಾದಿ ಅಭಿಮತ ವ್ಯಕ್ತ ಪಡಿಸಿದರು.
ಪಟ್ಟಣದ ಎಬಿಸಿಡಿ ನೃತ್ಯ ತರಬೇತಿ ಸಂಸ್ಥೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ರ್ಯಾಂಕ ಪಡೆದ ಆದರ್ಶ ಆಂಗ್ಲ ಮಾದ್ಯಮ ಪ್ರೌಡಶಾಲೆಯ ವಿದ್ಯಾರ್ಥಿ ಅಕ್ಷತಾ ರಾಠೋಡಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಭಾರತೀಯ ಸಂಸ್ಕøತಿಯ ದ್ಯೂತಕ ಅಂತೆಯೇ ಎಸ್.ಎಸ.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ ಪಡೆದು ತಾಲೂಕಿನ ಕೀರ್ತಿಯನ್ನು ಕರುನಾಡಿನಾಧ್ಯಂತ ಪಸರಿಸಿದ ಈ ತಾಲೂಕಿನ ಹೆಮ್ಮೆಯ ಕುವರಿಯನ್ನು ಗೌರವಿಸಿದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಶ್ಲ್ಯಾಘನೀಯ ಎಂದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಅಕ್ಷತಾ ರಾಠೋಡ ಮಾತನಾಡಿ, ತಂದೆ-ತಾಯಿ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಸಾಧನೆ ಮಾಡಲು ಅನುಕೂಲವಾಯಿತು. ಸಹಶಿಕ್ಷಕರು ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದರು ಅದಕ್ಕೆ 625ಕ್ಕೆ 625 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದೆ ಆದರೆ ಗಣೀತ ವಿಷಯದಲ್ಲಿ 2 ಅಂಕಗಳ ಪ್ರಶ್ನೆಗೆ ನಾನು ಆತಂಕದಿಂದ ಉತ್ತರಿಸಿದೆ ಅದೆ 2 ಮಾಕ್ಸ್ ಕಡಿಮೆಯಾಗಿ 623 ಅಂಕ ಬಂದಿವೆ ಅದರಿಂದ ನಾನು ಹಿಂಜೆರೆಯಲಾರೆ ನಾನು ಭವಿಷ್ಯದಲ್ಲಿ ವಿಜ್ಞಾನ ವಿಬಾಗಕ್ಕೆ ಸೇರ್ಪಡೆಯಾಗಿ ಮುಂದೆ ವೈಧ್ಯಕೀಯ ಶಿಕ್ಷಣ ಪಡೆದು ಬಡಜನರ ಸೇವೆ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಮತ್ತು ಗುರು ಹಿರಿಯರ ಸಹಕಾರ ಹೀಗೆ ಎಲ್ಲರ ಶುಭ ಹಾರೈಕೆಗಳು ಸದಾ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡಳು.
ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ ಮಾತನಾಡಿ, ಕೊವಿಡ್-19 ದಂತಹ ಸಮಸ್ಯೆಗಳ ಮಧ್ಯೆಯೂ ಹಲವಾರು ಪ್ರೇರಣಾತ್ಮಕ ಕ್ರಮಗಳ ಪ್ರಯೋಗದೊಂದಿಗೆ ಆದರ್ಶ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಅಕ್ಷತಾ ರಾಠೋಡ ರಾಜ್ಯಕ್ಕೆ 3ನೇ ರ್ಯಾಂಕ ಪಡೆದು ತಾಲೂಕಿನ ಕೀರ್ತಿ ರಾಜ್ಯಕ್ಕೆ ತೆಗೆದುಕೊಂಡು ಹೋಗಿದ್ದಾಳೆ ಇವಳ ಪ್ರೇರಣೆಯಿಂದ ಭವಿಷ್ಯತ್ತಿನ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ಶುಭ ಹಾರೈರಿಸಿದರು.

ಎಲೈಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಹಿಬೂಬ ಅಸಂತಾಪೂರ, ಆದರ್ಶ ಶಾಲೆಯ ಗುರುಮಾತೆ ಜ್ಯೋತಿ ನಂದಿಮಠ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಉಪಾದ್ಯಕ್ಷ ಮುತ್ತು ಶಾಬಾದಿಯವರು ವಿದ್ಯಾರ್ಥಿನಿಗೆ ನಗದು ರೂ 10 ಸಾವಿರ ನೀಡಿ ಗೌರವಿಸಿದರು.
ವೇದಿಕೆ ಮೇಲೆ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಜಿ.ಎಸ್.ರೋಡಗಿ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಕಾವ್ಯಾ ಸ್ಕೂಲನ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಎಬಿಸಿಡಿ ನೃತ್ಯ ತರಬೇತಿ ಸಂಸ್ಥೆಯ ಮುಖ್ಯಸ್ಥ ಜ್ಞಾನೇಶ ಗುರವ, ಶಿಕ್ಷಕರ ಸಂಘದ ಉಪಾದ್ಯಕ್ಷ ಎಂ.ಜಿ.ಯಂಕಂಚಿ, ವಿದ್ಯಾರ್ತಿನಿಯ ತಂದೆ ಶಶಿಕಾಂತ ರಾಠೋಡ ಹಾಗೂ ತಾಯಿ, ಪಂಡಿತ್ ಯಂಪುರೆ, ಪ್ರದೀಪ ಕತ್ತಿ, ಶಿವಕುಮಾರ ಕಲ್ಲೂರ ಸೇರಿದಂತೆ ಹಲವರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ಬಿರಾದಾರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬಸ್ಸನಿಲ್ದಾಣದಿಂದ ಟೀಪ್ಪು ವೃತ್ತದ ಮಾರ್ಗವಾಗಿ ಡಾ. ಅಂಬೇಡ್ಕರ ವೃತ್ತದಿಂದ ಎಬಿಸಿಡಿ ನೃತ್ಯ ತರಬೇತಿ ಸಂಸ್ಥೆಯವರೆಗೆ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here