ರಾಜ್ಯದಲ್ಲಿ ಇಂದು 7,330 ಕೊರೋನಾ ಪ್ರಕರಣ ಪತ್ತೆ: ಬೆಂಗಳೂರಿನಲ್ಲಿ 2,979 ಮಂದಿಗೆ ಸೋಂಕು ದೃಢ

0

 ರಾಜ್ಯದಲ್ಲಿ ಮತ್ತೆ 7,330 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,71,876ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2,979 ಸೋಂಕು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ 1,05,749 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನ 3,259 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಒಟ್ಟು 34,224 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ಬೀದರ್ ನಲ್ಲಿ 82, ಚಾಮರಾಜನಗರ 67, ಚಿಕ್ಕಬಳ್ಳಾಪುರ 79, ಚಿಕ್ಕಮಗಳೂರು 71, ಚಿತ್ರದುರ್ಗ 89, ದಕ್ಷಿಣ ಕನ್ನಡ 228, ದಾವಣಗೆರೆ 277, ಧಾರವಾಡ 253, ಗದಗ 1116, ಹಾಸನ 209, ಹಾವೇರಿ 141, ಕಲಬುರಗಿ 165, ಕೊಡಗು 24, ಕೋಲಾರ 69, ಕೊಪ್ಪಳ 170, ಮಂಡ್ಯ 146, ರಾಯಚೂರು 52, ರಾಮನಗರ 54, ಶಿವಮೊಗ್ಗ 221, ತುಮಕೂರು 103, ಉಡುಪಿ 368, ಉತ್ತರ ಕನ್ನಡ 64, ವಿಜಯಪುರ 151, ಯಾದಗಿರಿ 123 ಹಾಗೂ ಮೈಸೂರಿನಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ.

ಇನ್ನು ಇಂದು ರಾಜ್ಯಾದ್ಯಂತ 7,626 ಸೋಂಕಿತರು ಗುಣಮುಖರಾಗಿದ್ದು, ಈ ವರೆಗೆ 1,84,568 ಮಂದಿ ಚೇತರಿಸಿಕೊಂಡಿದ್ದಾರೆ. 82,677 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 93 ಮಂದಿ ಮೃತಪಟ್ಟಿದ್ದು, ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 4,615ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here