ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತು ಹಾಕಲು ಬಿಜೆಪಿ ಒತ್ತಾಯ : ಕಟೀಲ್

0

ರಾಜ್ಯದಲ್ಲಿನ ಡ್ರಗ್ಸ್ ದಂಧೆ ಹಾಗೂ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆಯಲ್ಲದೇ ಬುಡ ಸಮೇತ ಕಿತ್ತು ಹಾಕುವುದು ಬಿಜೆಪಿ ಪಕ್ಷದ ಒತ್ತಾಯವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪಕ್ಷದ ನೂತನ ಪದಾಧಿಕಾರಿಗಳ ಸಭೆ ಹಾಗೂ ಪಕ್ಷದ ಸಂಘಟನೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೇರೂರಿರುವ ಡ್ರಗ್ಸ್ ದಿಂದ ಯುವ ಜನಾಂಗ ಕೆಟ್ಟ ದಾರಿ ಹಿಡಿಯುವಂತಾಗಿದೆ. ಹಿಂದಿನ ಸರ್ಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಪಕ್ಷವೇ ಹೋರಾಟ ಮಾಡಿತ್ತು. ಜಾಲದ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆದರೆ ಈಗ ಸರ್ಕಾರ ಬುಡಸಮೇತ ಕಿತ್ತು ಹಾಕಲು ಮುಂದಾಗಿದೆ. ಈಗಾಗಲೇ ಕಾರ್ಯಾಚರಣೆ ಇಳಿದಿದೆ ಎಂದರು.

ಪಕ್ಷದ ಸಂಘಟನೆಗಾಗಿ ಹಾಗೂ ಕೋವಿಡ್ ದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪ್ರತಿಯೊಬ್ಬ ಕಾರ್ಯಕರ್ತ ಕನಿಷ್ಟ ಐದು ಜನರಿಗೆ ಸ್ಪಂದಿಸಲು ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಟೀಲ್ ತಿಳಿಸಿದರು.

ಕೋವಿಡ್ ದಿಂದ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲೆಗಳ ಶಿಕ್ಷಕರು ಬೇರೆ ಕೆಲಸ ಕಾರ್ಯಗಳಲಿ ತೊಡಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸರ್ಕಾರ ಶಿಕ್ಷಕರ ಸಂಬಳ ನೀಡುವಂತೆ ಹೇಳಿದೆ. ಸಂಸ್ಥೆಯವರು ಎಲ್ಲವನ್ನೂ ಅರಿಯಬೇಕೆಂದರು.

ಸಂಪುಟದಲ್ಲಿ ಪ್ರಾದೇಶಿಕ ವಾರು ಪ್ರಾತಿನಿಧ್ಯ ತೆ ಸಿಕ್ಕಿಲ್ಲ ಎಂಬುದು ಎಲ್ಲರಿಗೂ ಅರಿವಿದೆ. ಆದರೆ ಕೆಲವು ಪರಿಸ್ಥಿತಿ ಗಳಿಗೆ ರಾಜೀಯಾಗಿದ್ದರಿಂದ ಹಲವರಿಗೆ ಸೂಕ್ತ ಸ್ಥಾನಗಳು ಸಿಗದಿರುವುದಕ್ಕೆ ಕಾರಣವಾಗಿದೆ ಎಂದು ಕಟೀಲ್ ಹೇಳಿದರು.

LEAVE A REPLY

Please enter your comment!
Please enter your name here