ರಾಜ್ಯದಲ್ಲಿ ದಿನೆ ದಿನೆ ಕೊರೊನ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವದರಿಂದ | ಚಡಚಣ ಸಂಪೂರ್ಣ ಬಂದಮಾಡಿದ PSI ಸತಿಗೌಡರ

0

ಚಡಚಣ/ವಿಜಯಪುರ ನ್ಯೂಸ್…

ಚಡಚಣ ಸಂಪೂರ್ಣ ಬಂದಮಾಡಿದ PSI ಸತಿಗೌಡರ

ಚಡಚಣ:ರಾಜ್ಯದಲ್ಲಿ ದಿನೆ ದಿನೆ ಕೊರೊನ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವದರಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಲಾಕ್ಡೌನ ಸಡಿಲಿಕೆ ಬಳಿಕ ನಾಲ್ಕುನೆ ಭಾನುವಾರ ನಡೆದ ಕರ್ಫ್ಯೂಗೆ ಪಟ್ಟಣದ ಜನತೆ ಬೆಂಬಲ ಸೂಚಿಸಿದ್ದರೆ ಚಡಚಣದಲ್ಲಿ ಬಸ್ ನಿಲ್ದಾಣ, ಪ್ರಮುಖ ಬೀದಿಗಳು ಜನತಾ ಕರ್ಪುದಿಂದ ಪಟ್ಟಣದಲ್ಲಿ ಸಂಚಾರಗಳು ಕಾಣದೆ ಬಿಕೋ ಎನ್ನುತಿತ್ತು.
ಕೋವಿಡ್-19 ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ವಯ ಕೆಲವು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ತುರ್ತು ಸೇವೆಗಳಾದ ಮೆಡಿಕಲ್ ಮಳಿಗೆಗಳು, ಹಾಲಿನ ಅಂಗಡಿಗಳು, ಪೆಟ್ರೋಲ್ ಪಂಪ್‍ಗಳು, ಹೊರತುಪಡಿಸಿ ಯಾವುದೇ ಮಳಿಗೆಗಳು ತೆರೆಯದೆ ಪಟ್ಟಣ ಸಂಪೂರ್ಣ ಬಿಕೋ ಎನ್ನುತಿತ್ತು. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಮುಖಾಂತರ ಅನಗತ್ಯವಾಗಿ ಅಲೆದಾಡುವವರನ್ನು ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆಯು ನಡೆಯಿತು. ಅದಲ್ಲದೆ ನೆರೆಯ ಮಹಾರಾಷ್ಟ್ರದಿಂದ ಕಳ್ಳ ಮಾರ್ಗದಿಂದ ಆಗಮಿಸುವವರನ್ನು ಒಳನುಸಳದಂತೆ ನೀಡಿಕೊಂಡು PSI ಸತಿಗೌಡರ ಹಾಗೂ ಪೊಲೀಸರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆವ್ಯಕ್ತಪಡಿಸಿದ್ದಾರೆ.

ವರದಿ:ಎಸ್.ಎಸ್. ಬಗಲಿ
ಚಡಚಣ/ವಿಜಯಪುರ
ನ್ಯೂಸ್….

LEAVE A REPLY

Please enter your comment!
Please enter your name here