ರಾಜ್ಯದಲ್ಲಿ 6,257 ಮಂದಿಗೆ ಕೊರೊನಾ ಇಲ್ಲಿಯವರೆಗೆ 1,05,599 ಜನ ಸೋಂಕಿತರು ಡಿಸ್ಚಾರ್ಜ್

0

ರಾಜ್ಯದಲ್ಲಿಂದು 6,257 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ.ಇವರಲ್ಲಿ 1,05,599 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 79,606 ಸಕ್ರೀಯ ಸೋಂಕಿತರಿದ್ದಾರೆ.

 

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರ – 1610, ಬಳ್ಳಾರಿ – 736, ಬೆಳಗಾವಿ – 575, ಧಾರವಾಡ – 276, ದಕ್ಷಿಣ ಕನ್ನಡ – 243, ಮೈಸೂರು – 238, ಉಡುಪಿ – 219, ರಾಯಚೂರು – 201, ಶಿವಮೊಗ್ಗ – 189, ದಾವಣಗೆರೆ – 172, ಕೊಪ್ಪಳ – 169, ಕಲಬುರ್ಗಿ – 156, ಹಾಸನ – 146, ಮಂಡ್ಯ – 141, ಬಾಗಲಕೋಟೆ – 135, ವಿಜಯಪುರ – 121, ಯಾದಗಿರಿ – 102, ರಾಮನಗರ – 96, ಚಿಕ್ಕಮಗಳೂರು – 93, ತುಮಕೂರು – 89, ಗದಗ – 78, ಬೀದರ್ ಮತ್ತು ಉತ್ತರ ಕನ್ನಡ – 73, ಚಾಮರಾಜನಗರ – 72, ಕೋಲಾರ – 69, ಚಿತ್ರದುರ್ಗ – 47, ಕೊಡಗು – 41, ಹಾವೇರಿ – 36, ಚಿಕ್ಕಬಳ್ಳಾಪುರ – 33 ಮತ್ತು ಬೆಂಗಳೂರು ಗ್ರಾಮಾಂತರ – 28 ಸೇರಿದಂತೆ ಒಟ್ಟು 6257 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ.

ಇಂದು 86 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3398ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here