ರಾಜ್ಯದ ‘ಅನುದಾನಿತ ಶಿಕ್ಷಣ ಸಂಸ್ಥೆ’ಗಳ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಗಳಿಕೆ ರಜೆ ನಗಧೀಕರಣ’ಕ್ಕೆ ಅನುಮತಿ

0

ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ ನಿವೃತ್ತಿ ಹೊಂದಿರುವ ಶಿಕ್ಷಕ, ಸಿಬ್ಬಂದಿಗಳಿಗೆ ನಿವೃತ್ತಿ ನಂತ್ರದ ಪಿಂಚಣಿ, ಗಳಿಕೆ ರಜೆ ನಗಧೀಕರಣಕ್ಕಾಗಿ ಅವಕಾಶ ನೀಡಿದೆ. ಈ ಮೂಲಕ ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರು, ಸಿಬ್ಬಂದಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಲೆಕ್ಕಾಧಿಕಾರಿಗಳು ಹಾಗೂ ಆಯುಕ್ತರ ಆರ್ಥಿಕ ಸಲಹೆಗಾರರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು( ವಿಶ್ರಾಂತಿ ವೇತನದ ಪರಿವರ್ತಿತ ಮೌಲ್ಯ, ಉಪದಾನ ಮತ್ತು ಸಂಬಂಧಿಸಿದ ಇತರೆ ಉಪಲಬ್ದಿಗಳು) ಸೆಳೆಯಲು ಸೂಚಿಸಲಾಗಿದೆ.

ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗಧೀಕರಣಕ್ಕಾಗಿ ಸೂಚಿಸಲಾಗಿರುತ್ತದೆ.

ಪ್ರಸ್ತುತ ಸದರಿ ಲೆಕ್ಕ ಶೀರ್ಷಿಕೆ 2017-01-109-1-02 ರಡಿ ರೂ.1.00 ಲಕ್ಷಗಳನ್ನು SE-1ನಲ್ಲಿ ಕಲ್ಪಿಸಲಾಗಿದ್ದು, ಉಳಿದಂತೆ 2020-21ನೇ ಸಾಲಿನಲ್ಲಿ ನಿವೃತ್ತಿ ನೌಕರರಿಗೆ ನಿವೃತ್ತಿ ನಂತ್ರದ ಗಳಿಕೆ ರಜೆ ನಗಧೀಕರಣಕ್ಕೆ ಅಗತ್ಯವಿರುವ ಅನುದಾನವನ್ನು ಕಲ್ಪಿಸಲು ಆಡಳಿತ ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದೆ. ಇಂತಹ ಪಟ್ಟಿಯನ್ನು ಕೂಡಲೇ ಕಳಿಸಿಕೊಡುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here