ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ರವಿಶಂಕರ್ ಕರೆ ಸಂಘಟಿತ ಹೋರಾಟದಿಂದ ಹಕ್ಕುಗಳನ್ನು ಪಡೆಯಬೇಕು,

0

ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ರವಿಶಂಕರ್ ಕರೆ

ಸಂಘಟಿತ ಹೋರಾಟದಿಂದ ಹಕ್ಕುಗಳನ್ನು ಪಡೆಯಬೇಕು,

ಕೋಲಾರ

ಇಂದು ಸಮಾಜದಲ್ಲಿ ತಮಟೆ ಕಲಾವಿದರ ಬದುಕು ದುಸ್ತರವಾಗಿದೆ, ಸರ್ಕಾರದಿಂದ ಯಾವುದೇ ತೆರನಾದ ಸೌಲಭ್ಯಗಳನ್ನು ಪಡೆಯದೆ ತಮ್ಮ ಸ್ವಶಕ್ತಿಯಿಂದ ತಮಟೆ ಬಾರಿಸುವ ಮೂಲಕ ಬಂದ ಸಂಭಾವನೆ ಯಲ್ಲಿ ಜೀವನ ನಡೆಸುವ ದುರಂತ ಪರಿಸ್ಥಿತಿಯಲ್ಲಿ ಇದ್ದಾರೆ, ಅವರಿಗೆ ಸರ್ಕಾರವು ಕನಿಷ್ಟ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ರವಿಶಂಕರ್ ಒತ್ತಾಯಿಸಿದರು.

ಅವರು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಕೋಲಾರ ಮತ್ತು ಮುಳಬಾಗಿಲು ತಾಲೂಕು ತಮಟೆ ಕಲಾವಿದರ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ರಾಜ್ಯ ಸರ್ಕಾರವು ಪ್ರತಿಯೊಬ್ಬ ತಮಟೆ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕಿದೆ , ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯುವ ಸಲುವಾಗಿ ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತಾ ನಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಹಾಗೂ ತಮಟೆ ಕಲಾವಿದರ ಬದುಕು ಹಸನಾಗಬೇಕಾಗಿದೆ, ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅತ್ಯಗತ್ಯ ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಸಂಘಟಿತರಾಗಿ ಜಿಲ್ಲೆಯಲ್ಲೊಂದು ತಮಟೆ ಭವನ ಮಂಜೂರಾತಿಗಾಗಿ ಹೋರಾಡೋಣ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್ ಗಣೇಶ್ ಮಾತನಾಡಿ, ತಮಟೆ ಎಂಬುದು ಕಲೆಗಳ ತಾಯಿ, ಎಲ್ಲಾ ಕಲೆಗಳಿಗೂ ತಮಟೆಯೇ ಜೀವಾಳ, ಆಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋ ನ್ಮುಖರಾಗಬೇಕು ಎಂದರಲ್ಲದೆ ಸಂಘಟಿತ ಹೋರಾಟದಿಂದ ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಂಘದ ರಾಜ್ಯ ಅಧ್ಯಕ್ಷ ಮತ್ತಿಕುಂಟೆ ಕೃಷ್ಣ, ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ತಮಟೆ ಕಲಾವಿದರ ಸಂಘದ ಅಧ್ಯಕ್ಷ ರಾಮು, ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಎ.ಎಂ. ಮಂಜುನಾಥ್, ಖಜಾಂಚಿ ಶ್ರೀನಿವಾಸ್, ಹಿರಿಯ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ, ಕಾರ್ಯದರ್ಶಿ ಸಿ.ವಿ. ಮಂಜುನಾಥ್,ಕಲಾವಿದ ಮತ್ತಿಕುಂಟೆ ಕೃಷ್ಣ, ಮುಖಂಡರುಗಳಾದ ಸಂಪಂಗಿ, ನರಸಿಂಹಮೂರ್ತಿ, ಅವಿನಾಶ್ ಬಳಗದ ಪದ್ಮಾ ಅಮರನಾಥ್, ಚಿನ್ನಾಪುರ ಪಿಲ್ಲಪ್ಪ, ಗೋವಿಂದರಾಜು,ರಂಚಿತ್, ಆಂಜನಪ್ಪ, ಮಹೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಆನಂದ್, ಗೌರಿಪಾಳ್ಯ ರಾಜೇಶ್, ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೋಲಾರ ಮತ್ತು ಮುಳಬಾಗಿಲು ತಾಲೂಕುಗಳ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯಿತು, ನಂತರ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here