ರಾಜ್ಯ ಬಿಜೆಪಿ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸುತ್ತಿದೆ ಮೊದಲನೆಯದಾಗಿ ಅಭಿನಂದನೆಗಳು

0

ಜನಮೆಚ್ಚಿದ (ಯಡಿಯೂರಪ್ಪ) ಸರ್ಕಾರ

ರಾಜ್ಯ ಬಿಜೆಪಿ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸುತ್ತಿದ್ದು ಮೊದಲನೆಯದಾಗಿ ಅಭಿನಂದನೆಗಳು.
ಈ ಒಂದು ವರ್ಷದಲ್ಲಿ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಜನಪರ ಆಡಳಿತ ನಡೆಸಿದ ಸರ್ಕಾರ,
ಪ್ರಾರಂಭದಲ್ಲಿ ಬರ ನಂತರದಲ್ಲಿ ಘೋರ ಪ್ರವಾಹ ಈ ಎರಡೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜನರ ಕಷ್ಟಗಳಿಗೆ ಸ್ಪಂದಿಸಿ ರೈತರು, ನಿರ್ಗತಿಕರ ಪರವಾಗಿ ಕಾರ್ಯ ನಿರ್ವಹಿಸಿತ್ತು. ತದನಂತರದಲ್ಲಿ ಮಹಾಮಾರಿ ಕರೋನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟಿತು ಎದೆಗುಂದದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡು ಈಗಲೂ ಕೊವಿಡ್ 19 ವಿರುದ್ಧ ಹಗಲಿರುಳು ಎನ್ನದೇ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಜನರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ರೈತರು, ಬಡವರು, ನಿರ್ಗತಿಕರು, ಆಟೋ ಚಾಲಕರು, ಕಾರ್ಮಿಕರು, ವ್ಯಾಪಾರಸ್ಥರ ಬೆನ್ನಿಗೆ ನಿಂತು ನೇರವಾಗಿ ಅವರ ಖಾತೆಗೆ ಸಹಾಯಧನವನ್ನು ವರ್ಗಾವಣೆ ಮಾಡಿ ಸಂಕಷ್ಟದಿಂದ ಪಾರು ಮಾಡಿತು.
ಈಗ ಸರ್ಕಾರದ ಪಾಲಿಗೆ ರಾಜ್ಯದ ಅಭಿವೃದ್ಧಿ ಮತ್ತು ಪ್ರಕೃತಿ ನೀಡುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಇನ್ನಷ್ಟು ಜನಮೆಚ್ಚುಗೆ ಆಡಳಿತ ನೀಡುವಂತಾಗಲಿ.
ಎಷ್ಟೇ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ನವರು ದಿಟ್ಟವಾಗಿ ಭೇದಿಸಿ ಎಲ್ಲ ಸಚಿವರು, ಶಾಸಕರು, ಜನಪ್ರತಿನಿದಿಗಳೊಂದಿಗೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.

ಶರಣು ಚಲವಾದಿ

ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಐಟಿಸೆಲ್ ಸಂಚಾಲಕರು ನರಗುಂದ ಮತಕ್ಷೇತ್ರ

LEAVE A REPLY

Please enter your comment!
Please enter your name here