ರಾಜ್ಯ ಸರ್ಕಾರ ನಮ್ಮ ತಾಲ್ಲೂಕ ಅಭಿವೃದ್ಧಿಗಾಗಿ ಸುಮಾರು 48 ಕೊಟ್ಟಿ ಅನುದಾನವನ್ನು ಮಂಜುರು ಮಾಡಲಾಗಿದ್ದು

0

ರಾಜ್ಯ ಸರ್ಕಾರ  ನಮ್ಮ ತಾಲ್ಲೂಕ ಅಭಿವೃದ್ಧಿಗಾಗಿ ಸುಮಾರು 48 ಕೊಟ್ಟಿ ಅನುದಾನವನ್ನು ಮಂಜುರು ಮಾಡಲಾಗಿದ್ದು

ರಾಜ್ಯ ಸರ್ಕಾರ ನಮ್ಮ ತಾಲ್ಲೂಕ ಅಭಿವೃಧ್ಧಿಗಾಗಿ ಸುಮಾರು 48 ಕೊಟ್ಟಿ ಅನುದಾನವನ್ನು ಮಂಜುರು ಮಾಡಲಾಗಿದ್ದು ಈಗ ಇರುವ ಬಿಜೆಪಿ ಸರಕಾರ ತಡೆಹಿಡಿದಿದ್ದಾರೆ ಎಂದು ಶಾಸಕ ಎಸ್ ರಾಮಪ್ಪ ಆರೋಪಿಸಿದರು.
ನಗರದ ಕೇಶವನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಾರ್ಕ್ ಬುದುವಾರ ಉದ್ಘಾಟಿಸಿ ನಂತರ ವರದಿಗಾರರ ಜೊತೆ ಮಾತನಾಡಿದ ಅವರು ಇಲ್ಲಿನ ನಿವಾಸಿಗಳ ಹಲವು ದಿನಗಳ ಬೇಡಿಕೆಯನ್ನು ನಾವು ಮತ್ತು ನಗರಸಭೆ ಸಹಯೋಗದಿಂದ 14 ನೇ ಹಣಕಾಸಿನಲ್ಲಿ 9 ಲಕ್ಷ ವೆಚ್ಚದಲ್ಲಿ ಈ ಪಾರ್ಕ್ ಅತ್ಯಂತ ಸುಂದರವಾಗಿ ಮಾಡಲಾಗಿದೆ ಇದರಿಂದ ಹಿರಿಯ ವಯಸ್ಸಿನ ನಾಗರಿಕರಿಗು ಮತ್ತು ಮಕ್ಕಳಿಗೆ ಆಟವಾಡಲು ಮತ್ತು ಕ್ರೀಡಾಪಟುಗಳಿಗೆ ವರ್ಕೌಟ್ ಮಾಡಲು ನಿರ್ಮಾಣವಾಗಿರುವ ಪಾರ್ಕ್ ಅತ್ಯಂತ ಸಹಕಾರಿಯಾಗಲಿದೆ ಸಾರ್ವಜನಿಕ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಾನೂ ನಮ್ಮ ತಾಲ್ಲೂಕಿನ ಅಭಿವೃಧ್ಧಿಗಾಗಿ ಹಲವು ಯೋಜನೆ ಹಾಕಿ ಕೊಂಡಿದ್ದೇನೆ ಆದರೆ ನಮ್ಮ ರಾಜ್ಯ ಸರಕಾರ ಸಹಾಕಾರ ಮಾಡುತ್ತಿಲ್ಲ ಈ ಪೂರ್ವದಲ್ಲಿ ಜಮೀರ ಅಹ್ಮದ್ರವರು ಸಚಿವರು ಇದ್ದಾಗ ನಗರದ ಟೀಪು ನಗರದಲ್ಲಿ ವಿವಿಧ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುಮಾರು 65 ಲಕ್ಷ ರೂಪಾಯಿ ಅನುದಾನ ಮಂಜುರು ಮಾಡಿಸಿದ್ದು ಅದು ಈಗ ಕೆಲಸ ಪ್ರಾರಂಭವಾಗಿದೆ ರಾಜ್ಯ ಸರಕಾರ ನಮ್ಮ ತಾಲ್ಲುಕುಗಾಗಿ ಬರುವ ಅನುದಾನವನ್ನು ತಡೆಹಿಡಿದ್ದಿರಿಂದ ಪ್ರತಿಭಟನೆ ಹೊರಾಟ ಮಾಡ ಬೇಕಾಗುತ್ತದೆ ಎಂದು ಆಕ್ರೋಶದಿಂದ ಹೇಳಿದರು.
ಈ ವೇಳೆ ಇದೇ ವಾರ್ಡಿನ ಸದಸ್ಯರಾದ ಶ್ರೀ ಮತಿ ಸುಮಿತ್ರ ಕೆ ಮರಿದೇವಪ್ಪ. ನಗರ ಸಭೆ ಆಯುಕ್ತೆ ಶ್ರಿ ಮತಿ ಲಕ್ಷ್ಮಿ, ಹಿರಿಯ ಇಂಜಿನಿಯರ್ ಎಸ್ಎಸ್ ಬೀರಾದರ್, ಸಹಾಯಕ ಇಂಜಿನಿಯರ್ ಅಬ್ದುಲ್ ಹಮೀದ್, ಜೂನಿಯರ್ ಇಂಜಿನಿಯರ್ ನೌಶಾದ್, ನಗರ ಸಭೆ ಸದಸ್ಯರಾದ ಅಬ್ದುಲ್ ಅಲೀಂ, ಮಾಹಬುಬ ಬಾಷ,ಸಿಧ್ಧಣ್ಣ,ಎಂಎಸ್.ಬಾಬುಲಾಲ, ಮುಖಂಡರಾದ ದಾದಾಪೀರ ಬಾನ್ನುವಳ್ಳಿ, ಜಾಕೀರ್, ಸುಭಾಷ,ಸೇರಿದಂತೆ ಅನೇಕ ಮುಖಂಡರು ಸಾರ್ವಜನಿಕರು ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here