ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲೇ ಸ್ಥಾಪಿಸಲಿ: ಸರ್ಕಾರಕ್ಕೆ ಆಗ್ರಹ ಮಾಡಿದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು

0

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲೇ ಸ್ಥಾಪಿಸಲಿ: ಸರ್ಕಾರಕ್ಕೆ ಆಗ್ರಹ ಮಾಡಿದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು

ಸ್ಥಳ: ಕಿತ್ತೂರು

ಹೌದು ಇಡೀ ದೇಶದಲ್ಲೇ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆಯನ್ನು ಮೊಳಗಿಸಿ ಸಿಡಿದೆದ್ದು ಕಿಚ್ಚು ಹೊತ್ತಿಸಿದ ಕೀರ್ತಿ ಕಿತ್ತೂರು ಸಂಸ್ಥಾನಕ್ಕೆ ಸಲ್ಲುತ್ತದೆ. ಅದರಲ್ಲೂ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನವರ ಹೆಸರು ಹೇಳಿದರೆ ಸಾಕು ಯುವಕರಲ್ಲಿ ಕ್ರಾಂತಿಯ ಕಿಚ್ಚನ್ನು ಮೂಡಿಸುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಶೌರ್ಯ, ದೈರ್ಯ ಹಾಗೂ ಹೋರಾಟಗಳ ಮೂಲಕ ಹೆಸರುವಾಸಿಯಾದ ಕಿತ್ತೂರು ನಾಡಿಗೆ ಸರ್ಕಾರಗಳು ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲ ಅಭಿವೃದ್ಧಿಯ ವಿಷಯದಲ್ಲಿ ತಾರತಮ್ಯ ತುಂಬಾನೇ ತಾರತಮ್ಯ ಮಾಡುತ್ತಿದೆ.
ಇತ್ತೀಚೆಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿಗೆ ಸ್ಥಳಾಂತರ ಗೊಳಿಸಬೇಕು ಎಂಬುದು ಅಖಂಡ ಕಿತ್ತೂರು ತಾಲ್ಲೂಕಿನ ಸಮಸ್ತ ಜನತೆಯ ಆಶಯವಾಗಿತ್ತು…!
ಇದಕ್ಕೆ ಪೂರಕವೆಂಬಂತೆ ಇಲ್ಲಿನ ಜನಪ್ರತಿನಿಧಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿರುವುದು ಸ್ಪಷ್ಟವಾಗಿ ದಾಖಲೆಗಳು ಸಿಗುತ್ತವೆ.
ಆದರೇ ಕಳೆದ ವಾರ ಸರ್ಕಾರ ಏಕ ಏಕೀ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿತು, ತದನಂತರ ಎರಡೇ ದಿನಗಳಲ್ಲಿ ಅದೇ ಸ್ಥಳದಲ್ಲಿ ಭೂಮಿಯನ್ನು ಸಹ ಮಂಜೂರು ಮಾಡಿ ಆದೇಶ ಹೊರಡಿಸಿ ಬಿಟ್ಟಿತು.
ಇನ್ನೇನು ಹೋರಾಟಕ್ಕೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಸರ್ಕಾರದ ನಡೆ ನೋಡಿದರೇ ಕಿತ್ತೂರಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ಥಾಪಿಸಲು ಮನಸಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಆದ್ದರಿಂದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಭೇಟಿಕೊಟ್ಟು ಇಲ್ಲಿರುವ ಸ್ಥಳೀಯರೊಂದಿಗೆ ಚರ್ಚಿಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲೇ ಸ್ಥಾಪಿಸಲೇ ಬೇಕು
ಸಾಂಕೇತಿಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದರು ಆದ್ದರಿಂದ ಈ ಹೋರಾಟ ಯಾವ ರೀತಿಯ ಆಯಾಮ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ..!

 

LEAVE A REPLY

Please enter your comment!
Please enter your name here