ರಾತ್ರೋ ರಾತ್ರಿ ಮೂರು ಸುತ್ತು ಗುಂಡಿನ ದಾಳಿ ನಡೆದು, ಗುಂಡಿನ ದಾಳಿಗೆ ಒಬ್ಬ ಸಾವನ್ನಪ್ಪಿದ್ದರೆ,
ರಾತ್ರೋ ರಾತ್ರಿ ಮೂರು ಸುತ್ತು ಗುಂಡಿನ ದಾಳಿ ನಡೆದು, ಗುಂಡಿನ ದಾಳಿಗೆ ಒಬ್ಬ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇದರಿಂದಾಗಿ ಮದಿಹಾಳ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಫಲಿಸದೆ ಒಬ್ಬ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ್ದವನನ್ನು ಶಿವಯೋಗಿ ಬಾವಿಕಟ್ಟಿ ಎಂದು ಗುರುತಿಸಲಾಗಿದೆ. ಇತ ನವಲಗುಂದ ತಾಲೂಕಿನ ಶಿರೂರ ಗ್ರಾಮದವನಾಗಿದ್ದು, ಈತ ಕಳೆದ ಹಲವು ದಿನಗಳಿಂದ ಧಾರವಾಡದಲ್ಲಿಯೇ ವಾಸಿಸುತ್ತಿದ್ದ ಎನ್ನಲಾಗಿದೆ.
ಗಾಯಗೊಂಡವರನ್ನು ಈರಣ್ಣ ಇಂಗಳ್ಳಿ ಹಾಗೂ ಸುನೀಲ ಕೋನಣ್ಣವರ ಎಂದು ಗುರುತಿಸಲಾಗಿದೆ. ಇವರ ಮೇಲೆ ಶ್ರೀಶೈಲ್ ಎಂ.ಜಿ. ಅಲಿಯಾಸ್ ಡಬಲ್ ಗೋಡಾ ಎಂಬಾತನೇ ಗುಂಡಿನ ದಾಳಿ ನಡೆಸಿದ್ದಾನೆ.
ಆಸ್ತಿ ವಿವಾದ ಹಿನ್ನಲೆಯಲ್ಲಿ ಶ್ರೀಶೈಲ್ ಎಂ.ಜಿ. ಮಾವನೇ ಅಳಿಯ ಶಿವಯೋಗಿ ಬಾವಿಕಟ್ಟಿಯನ್ನು ಹೊಡೆದು ಕೊಂದು ಹಾಕಿದ್ದಾನೆ ಎಂದು ಗೊತ್ತಾಗಿದೆ. ಶ್ರೀಶೈಲ್ ಬಳಿ ಪರವಾನಿಗೆ ಹೊಂದಿದ ರಿವಾಲ್ವರ್ ಇತ್ತು ಎನ್ನಲಾಗಿದೆ. ಇತನನ್ನು ತನ್ನಅಳಿಯ ಬೆದರಿಸಲು ಬಂದಾಗತಿರುಗಿಬಿದ್ದಿದ್ದಾನೆ ಎಂದು ಹೇಳಲಾಗಿದೆ. ಶ್ರೀಶೈಲ್ ಎಂ.ಜಿ. ಈ ಹಿಂದೆ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಆತನ ಮೇಲೆ ಕೂಡ ರೌಡಿಶೀಟರ್ ಇದೆ. ಆತ ಕೆಲವು ಪ್ರಭಾವಿ ರಾಜಕಾರಣಿಗಳ ಜೊತೆಗೆ ಗುರುತಿಸಿಕೊಂಡಿದ್ದ ಎಂದು ಪೊಲೀಸ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಧಾರವಾಡ ಶಹರಪೊಲೀಸ್ ಠಾಣೆ ಸಿಬ್ಬಂದಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
VIDEO