ರಾಮಮಂದಿರ ಭೂಮಿಪೂಜೆಗೆ ಮಹೂರ್ತ ಇಟ್ಟ ಪಂಡಿತನಿಗೆ ಮಹೂರ್ತ…?

0

ಆಗಸ್ಟ್​ 5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವನ್ನು ಇಟ್ಟ ಬೆಳಗಾವಿಯ ಪಂಡಿತ್​ ಎನ್​.ಆರ್​.ವಿಜಯೇಂದ್ರ ಶರ್ಮ ಅವರಿಗೆ ಆಪತ್ತು ಎದುರಾಗಿದೆ.

ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸದ್ಯ ಅವರ ಮನೆಗೆ ಈಗ ಭದ್ರತೆಗಾಗಿ ಓರ್ವ ಪೊಲೀಸ್​ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಪಂಡಿತ್ ಶರ್ಮಾ ಅವರು ಬೆಳಗಾವಿಯ ನಿವಾಸಿ. ರಾಮ ಮಂದಿರ ಭೂಮಿ ಪೂಜೆಗೆ ಬೇರೆ ಮುಹೂರ್ತವನ್ನು ಇಡಿ. ಇಲ್ಲದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಹಲವು ಫೋನ್​ ಕರೆಗಳು ಬರುತ್ತಿವೆ ಎಂದು ಶರ್ಮಾ ತಿಳಿಸಿದ್ದಾರೆ.

ನೀವ್ಯಾಕೆ ಆಗಸ್ಟ್​ 5ರಂದೇ ಭೂಮಿಪೂಜೆಗೆ ಮುಹೂರ್ತವನ್ನು ಇಟ್ಟಿದ್ದೀರಿ. ಈ ಸಮಾರಂಭದಲ್ಲಿ ನೀವ್ಯಾಕೆ ಪಾಲ್ಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಾರೂ ತಮ್ಮ ಹೆಸರನ್ನು ಹೇಳುತ್ತಿಲ್ಲ. ಬೈಯುತ್ತಾರೆ, ಕಠಿಣವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಬೆಳಗಾವಿಯ ತಿಲಕ್​​ವಾದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಕೊಲೆ ಬೆದರಿಕೆಯಂತಹ ಫೋನ್​ ಕರೆಗಳು ಬಂದಿಲ್ಲ ಎಂದೂ ತಿಳಿಸಿದ್ದಾರೆ.

ಪಂಡಿತ್​ ಶರ್ಮಾ ಅವರು ಮೊದಲು ಏಪ್ರಿಲ್​​ನಲ್ಲಿ ಅಕ್ಷಯ ತೃತೀಯಕ್ಕೆ ಸರಿಯಾಗಿ ಮುಹೂರ್ತ ಇಟ್ಟಿದ್ದರು. ಆದರೆ ನಂತರ ಲಾಕ್​ಡೌನ್​ ಹೇರಲ್ಪಟ್ಟಿದ್ದರಿಂದ ಮುಹೂರ್ತವನ್ನು ಬದಲಾವಣೆ ಮಾಡಿ, ಆಗಸ್ಟ್​ 5ಕ್ಕೆ ಇಟ್ಟಿದ್ದಾರೆ.

ಮಾಹಿತಿ – ಏಜನ್ಸಿಸ್

LEAVE A REPLY

Please enter your comment!
Please enter your name here