ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಇದುವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಸಾಕಷ್ಟು ಟ್ರೋಲ್ ಗೊಳಗಾಗಿದೆ. ಈ ಬಾರಿಯಾದರೂ ಯಶಸ್ಸು ಕಾಣಬಹುದೆಂಬ ವಿಶ್ವಾಸದಲ್ಲಿದೆ.
ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಈಗಾಗಲೇ ತಂಡಗಳು ಅರಬರ ರಾಷ್ಟ್ರಕ್ಕೆ ತೆರಳಿದೆ. ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ ಯಶಸ್ಸು ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಬೇರೆ ನಾಯಕತ್ವದೊಂದಿಗೆ ಕಣಕ್ಕಿಳಿಯಲಿದೆಯೇ? ಈ ಪ್ರಶ್ನೆಗೆ ಫ್ರಾಂಚೈಸಿ ಹೇಳಿದ್ದೇನು ಗೊತ್ತಾ?
ಆದರೆ ಈ ನಡುವೆ ಆರ್ ಸಿಬಿ ಮಾಲಿಕರಿಗೆ ಈ ಬಾರಿಯ ಐಪಿಎಲ್ ನಲ್ಲಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಆರ್ ಸಿಬಿ ಮಾಲಿಕರಾಗಿ ವಿರಾಟ್ ನಮ್ಮ ಜತೆಗಿದ್ದಾರೆ ಎನ್ನುವುದು ನಮಗೆ ಗೌರವದ ಸಂಗತಿ. ಅವರು ಭಾರತೀಯ ನಾಯಕ. ಅವರಿಗೆ ಇರುವ ಅಭಿಮಾನಿಗಳು ಬೇರೆ ಯಾರಿಗೂ ಇಲ್ಲ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಸೋಲು-ಗೆಲುವು ಆಟದಲ್ಲಿ ಸಾಮಾನ್ಯ’ ಎಂದಿದ್ದಾರೆ.