ರಾಯಲ್ ಚಾಲೆಂಜರ್ಸ್ ಬೆಂಗಳೂರು- ಡಿಪಿ ವರ್ಲ್ಡ್ ಮಧ್ಯೆ ದೀರ್ಘಾವಧಿ ಒಪ್ಪಂದಕ್ಕೆ ಸಹಿ

0

ಜಾಗತಿಕವಾಗಿ ಸ್ಮಾರ್ಟ್ ಲಾಜಿಸ್ಟಿಕ್ ಸಲೂಶನ್ಸ್ ಅನ್ನು ಪೂರೈಕೆ ಮಾಡುತ್ತಿರುವ ಪ್ರಮುಖ ಕಂಪನಿಯಾಗಿರುವ ಡಿಪಿ ವರ್ಲ್ಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ದೀರ್ಘಾವಧಿಯ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಆರ್ ಸಿಬಿ ತಂಡಕ್ಕೆ ಡಿಪಿ ಜಾಗತಿಕ ಲಾಜಿಸ್ಟಿಕ್ ಪಾಲುದಾರ ಸಂಸ್ಥೆಯಾಗಲಿದೆ.

ಆರ್ ಸಿಬಿ ಮತ್ತು ಡಿಪಿ ಜಾಗತಿಕ ಪಾಲುದಾರಿಕೆಯನ್ನು ಮೌಲ್ಯಗಳನ್ನು ಪರಸ್ಪರ ಹಂಚಿಕೆ ಆಧಾರದ ಮೇಲೆ ಮಾಡಿಕೊಳ್ಳಲಾಗಿದೆ. ಎರಡೂ ಸಂಸ್ಥೆಗಳು ನಾಯಕತ್ವ, ಉತ್ಸಾಹ ಮತ್ತು ಉತ್ಕೃಷ್ಠತೆಯ ಸಂಸ್ಕೃತಿಯನ್ನು ಹೊಂದಿರುವ ಬೋಲ್ಡ್ ಮತ್ತು ಶಕ್ತಿಶಾಲಿ ಸಂಸ್ಥೆಗಳಾಗಿವೆ. ತಂಡವು ಮೈದಾನದ ಒಳಗೆ ಮತ್ತು ಹೊರಗೆ ಈ ಮೌಲ್ಯಗಳನ್ನು ನಿರೂಪಿಸುವ ಅಪ್ರತಿಮ ಆಟಗಾರರಿಂದ ತುಂಬಿರುತ್ತದೆ.

ಈ ಪಾಲುದಾರಿಕೆ ಅಡಿಯಲ್ಲಿ ಡಿಪಿ ವರ್ಲ್ಡ್ ತನ್ನ ಜಾಗತಿಕ ಲಾಜಿಸ್ಟಿಕ್ಸ್ ಪರಿಣಿತಿಯನ್ನು ಆರ್ ಸಿಬಿಯ ಲಾಜಿಸ್ಟಿಕ್ ಅಗತ್ಯತೆಗಳನ್ನು ಪೂರೈಸಲು ಬಳಸಿಕೊಳ್ಳಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಬಿಸಿಸಿಐ ಟಿ20 ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಆಟಗಾರರ ಪ್ರಯಾಣ, ಟ್ರೈನಿಂಗ್ ಗೇರ್, ಮ್ಯಾಚ್ ಕಿಟ್ ಗಳನ್ನು ಯಾವುದೇ ತೊಡಕು ಇಲ್ಲದೇ ಭಾರತದಿಂದ ದುಬೈಗೆ ಸಾಗಿಸಲು ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಡಿಪಿ ವರ್ಲ್ಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಒಪ್ಪಂದ ಮಾಡಿಕೊಂಡಿವೆ.

ಆರ್ ಸಿಬಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕ್ರಿಕೆಟ್ ಸೇರ್ಪಡೆ ಆಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರೀಡಾ ಪಾಲುದಾರಿಕೆಗಳ ಪೋರ್ಟ್ ಫೋಲಿಯೋ ವಿಸ್ತರಣೆ ಆಗುತ್ತಿದೆ. ಈ ಪೋರ್ಟ್ ಫೋಲಿಯೋದಲ್ಲಿ ಗಾಲ್ಫ್ ಮತ್ತು ಫಾರ್ಮುಲಾ 1 ಸೇರಿವೆ. ಡಿಪಿ ವರ್ಲ್ಡ್ ಯೂರೋಪಿಯನ್ ಟೂರ್ ಮತ್ತು ಡಿಪಿ ವರ್ಲ್ಡ್ ಟೂರ್ ಚಾಂಪಿಯನ್ ಶಿಪ್ ನ ಟೈಟಲ್ ಸ್ಪಾನ್ಸರ್ ಆಗಿದೆ. ಯೂರೋಪಿಯನ್ ಗಾಲ್ಫ್ ಐಕಾನ್ ಆಗಿರುವ ಇಯಾನ್ ಪೌಲ್ಟರ್ ಅವರನ್ನು ಕಂಪನಿಯು ತನ್ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡ್ ಆಗಿ ನೇಮಕ ಮಾಡಿಕೊಂಡಿದೆ.

ಆರ್ ಸಿಬಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲವರ್ಧನೆ ಮಾಡಿಕೊಳ್ಳುವ ಡಿಪಿ ವರ್ಲ್ಡ್ ನ ಬದ್ಧತೆಗೆ ನೆರವಾಗಲಿದೆ. 462 ದಶಲಕ್ಷ ವೀಕ್ಷಕರನ್ನು ಹೊಂದಿರುವ ಟಿ20 ಟೂರ್ನಿಯು ವಿಶ್ವದ ಅತಿ ದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಗಳಲ್ಲಿ ಒಂದಾಗಿರುವ ಡಿಪಿ ವರ್ಲ್ಡ್ ದೇಶದ ಒಟ್ಟು ಕಂಟೇನರ್ ವಹಿವಾಟುಗಳ ಕಾಲುಭಾಗವನ್ನು ನಿರ್ವಹಣೆ ಮಾಡುತ್ತಿದೆ.

”ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಆರ್ ಸಿಬಿ ಜತೆಗಿನ ಒಪ್ಪಂದವು ಎರಡು ಶಕ್ತಿಶಾಲಿ

ಜಾಗತಿಕ ಬ್ರ್ಯಾಂಡ್ ಗಳ ಸಂಗಮವಾಗಿದ್ದು, ಇವುಗಳು ಶ್ರೇಷ್ಠತೆಗಾಗಿ ಇದೇ ರೀತಿಯ ಉತ್ಸಾಹವನ್ನು ಹಂಚಿಕೊಳ್ಳುತ್ತವೆ. ಅತ್ಯದ್ಭುತವಾದ ದಾಖಲೆಗಳನ್ನು ಮಾಡಿರುವ ಕೆಲವು

ಐಕಾನಿಕ್ ಆಟಗಾರರನ್ನು ಆರ್ ಸಿಬಿ ತಂಡ ಒಳಗೊಂಡಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಈ ವರ್ಷದ ಪಂದ್ಯಾವಳಿಗಳಿಗೆ ವಿಶಿಷ್ಟವಾದ ರೀತಿಯಲ್ಲಿ ಹೆಚ್ಚುವರಿ ಲಾಜಿಸ್ಟಿಕ್ಸ್

ಸಂಕೀರ್ಣತೆಗಳನ್ನು ಅವಲೋಕಿಸಿದರೆ ನಾವು ಡಿಪಿ ವರ್ಲ್ಡ್ ನಲ್ಲಿ ಆರ್ ಸಿಬಿಯನ್ನು ಬೆಂಬಲಿಸಲು ನಮ್ಮ ಜಾಗತಿಕ ಲಾಜಿಸ್ಟಿಕ್ ಅನುಭವವನ್ನು ಬಳಕೆ ಮಾಡಿಕೊಳ್ಳಲಿದ್ದೇವೆ” ಎಂದು ಡಿಪಿ ವರ್ಲ್ಡ್ ನ ಸಬಕಾಂಟಿನೆಂಟ್ ಸಿಇಒ & ಎಂಡಿ ರಿಜ್ವಾನ್ ಸೋಮರ್ ಅವರು ಹೇಳಿದ್ದಾರೆ.

ಎಕ್ಸ್ ಪ್ರೆಸ್ & ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಸರ್ವೀಸಸ್, ರೇಲ್ ಸರ್ವೀಸಸ್, ಇನ್ ಲ್ಯಾಂಡ್ ರೇಲ್ ಟರ್ಮಿನಲ್ಸ್, ಕೋಲ್ಡ್ ಚೇನ್ ಮತ್ತು ಫೀಡರ್ ಸರ್ವೀಸ್ ಗಳನ್ನು ಭಾರತದಲ್ಲಿ ನೀಡುತ್ತಿರುವ ಡಿಪಿ ವರ್ಲ್ಡ್ ಸಮಗ್ರವಾದ ಲಾಜಿಸ್ಟಿಕ್ ಪರಿಹಾರಗಳನ್ನು ಪೂರೈಸುತ್ತಿದೆ ಮತ್ತು ಎಲ್ಲಾ ಮಾದರಿಯ ಸ್ಟೋರೇಜ್ ಗಳು, ಎಲ್ಲಾ ಬಗೆಯ ಸಾರಿಗೆ ಮತ್ತು ಎಲ್ಲಾ ವಿಧದ ಸಗಟು, ದೇಶೀಯ, ಎಕ್ಸಿಂ ಮತ್ತು ಉಷ್ಣಾಂಶ ನಿಯಂತ್ರಿತ ಕಾರ್ಗೋ ಸೇರಿದಂತೆ ಗ್ರಾಹಕರಿಗೆ ಅಗತ್ಯವಿರುವ ಲಾಜಿಸ್ಟಿಕ್ ಸೇವೆಗಳನ್ನು ನೀಡುತ್ತಿದೆ.

LEAVE A REPLY

Please enter your comment!
Please enter your name here