ರಿಲಯನ್ಸ್‌ ರಿಟೇಲ್‌ನಲ್ಲಿ ₹5,550 ಕೋಟಿ ಹೂಡಿಕೆ ಮಾಡಲಿದೆ ಕೆಕೆಆರ್‌

0

ರಿಲಯನ್ಸ್‌ ರಿಟೇಲ್‌ನಲ್ಲಿ ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್‌&ಕಂ. ₹5,550 ಕೋಟಿ ಹೂಡಿಕೆ ಮಾಡಲಿದೆ. ಇದರೊಂದಿಗೆ ರಿಲಯನ್ಸ್‌ ರಿಟೇಲ್‌ನಲ್ಲಿ ಶೇ 1.28ರಷ್ಟು ಪಾಲುದಾರಿಕೆ ಹೊಂದಲಿದೆ.

ರಿಲಯನ್ಸ್‌ ರಿಟೇಲ್‌ನಲ್ಲಿ ಕೆಕೆಆರ್‌ ಎರಡನೇ ಬಾರಿಗೆ ಹೂಡಿಕೆ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ರಿಲಿಯನ್ಸ್ ಜಿಯೊದಲ್ಲಿ ಕೆಕೆಆರ್‌ ₹11,367 ಕೋಟಿ ಹೂಡಿಕೆ ಮಾಡಿತ್ತು. ಅಮೆರಿಕದ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್‌ ಇತ್ತೀಚೆಗಷ್ಟೇ ರಿಲಯನ್ಸ್‌ ರಿಟೇಲ್‌ನಲ್ಲಿ ₹7,500 ಕೋಟಿ ಹೂಡಿಕೆ ಮೂಲಕ ಶೇ 1.75ರಷ್ಟು ಪಾಲುದಾರಿಕೆ ಹೊಂದುವುದಾಗಿ ಘೋಷಿಸಿತ್ತು.

ಸದ್ಯ, ಕೆಕೆಆರ್‌ ತನ್ನ ಏಷ್ಯಾದ ಖಾಸಗಿ ಷೇರು ನಿಧಿಯಿಂದ ರಿಲಯನ್ಸ್‌ ರಿಟೇಲ್‌ನಲ್ಲಿ ಹೂಡಿಕೆ ಮಾಡಲಿದೆ

ಉದ್ಯಮಿ ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್, ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ತನ್ನ ರಿಟೇಲ್ ವ್ಯವಹಾರವನ್ನು ವೇಗವಾಗಿ ಅಭಿವೃದ್ಧಿಗೊಳಿಸುತ್ತಿದೆ.

LEAVE A REPLY

Please enter your comment!
Please enter your name here