ರೇಪ್ ಕೇಸ್’ ಬೆದರಿಕೆ ಒಡ್ಡಿದ್ದ ಸಂಗೀತಾಗೆ ಡ್ರಗ್ ಪೆಡ್ಲರ್ ರಾಹುಲ್ ಸಖತ್ ಕ್ಲೋಸ್! ವಿಡಿಯೋ

0

ರೇಪ್ ಕೇಸ್’ ಬೆದರಿಕೆ ಒಡ್ಡಿದ್ದ ಸಂಗೀತಾಗೆ ಡ್ರಗ್ ಪೆಡ್ಲರ್ ರಾಹುಲ್ ಸಖತ್ ಕ್ಲೋಸ್!; ಫೋಟೋಗಳು ವೈರಲ್
ಬೆಂಗಳೂರು: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೋರ್ವರು ಅಧಿಕಾರಿಗಳಿಗೆ ರೋಪ್ ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಮಹಿಳೆಯ ಹೆಸರು ಸಂಗೀತಾ ಗೋಪಾಲ್. ತುಂಬ ಅಸಭ್ಯವಾಗಿ, ಅಹಂಕಾರದಿಂದ ಅಧಿಕಾರಿಗಳಿಗೇ ಧಮ್ಕಿ ಹಾಕುವ ಈಕೆಯ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸಿಸಿಬಿಯಿಂದ ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ ರಾಹುಲ್ಗೆ ಈ ಸಂಗೀತಾ ತುಂಬ ಆಪ್ತೆ ಎಂದು ಗೊತ್ತಾಗಿದೆ. ಅವರಿಬ್ಬರೂ ಒಟ್ಟಿಗೇ ಇರುವ ಅನೇಕ ಫೋಟೋಗಳೂ ವೈರಲ್ ಆಗಿವೆ.
ಆಕೆ ಬೆದರಿಸುವ ವಿಡಿಯೋವನ್ನು ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವರು ತಮ್ಮ ಟ್ವಿಟರ್ ಮೂಲಕ ಬೆಂಗಳೂರು ಸಿಟಿ ಪೊಲೀಸರ ಗಮನಕ್ಕೂ ತಂದಿದ್ದರು. ಹಾಗೇ ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯಾ ಅವರು ಇಂದಿರಾನಗರ ಠಾಣೆಯಲ್ಲಿ ಮತ್ತು ನಗರ ಪೊಲೀಸ್ ಕಮಿಷನರ್ ಗೆ ಸಂಗೀತಾ ಗೋಪಾಲ್ ವಿರುದ್ಧ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here