ರೈತರ ಜೀವನಾಡಿಯಾಗಿರುವ ಮಂಡ್ಯ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಉಪಾಧ್ಯಕ್ಷರಾದ ಚಾಲನೆ ನೀಡಿದರು.

0

ರೈತರ ಜೀವನಾಡಿಯಾಗಿರುವ ಮಂಡ್ಯ ಮಾಕವಳ್ಳಿಯ ಕೋರಮಂಡಲ್.

ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ವಿ.ಜೆ.ರವಿರೆಡ್ಡಿ ದಂಪತಿಗಳು ಚಾಲನೆ ನೀಡಿದರು.

ಕಳೆದ ಸಾಲಿನಲ್ಲಿ ಎಂಟೂವರೆ ಲಕ್ಷ ಟನ್ ಕಬ್ಬನ್ನು ಶೇ.10.25ರ ಸಕ್ಕರೆ ಇಳುವರಿಯಲ್ಲಿ ಅರೆದು ದಾಖಲೆ ನಿರ್ಮಿಸಿದ್ದ ಕೋರಮಂಡಲ್

ಸಕ್ಕರೆ ಕಾರ್ಖಾನೆ ರೈತಸ್ನೇಹಿಯಾಗಿದ್ದು ಕಬ್ಬು ಬೆಳೆಗಾರರು ಕಾರ್ಖಾನೆಗೆ ಸರಬರಾಜು ಮಾಡಿರುವ.

ಕಬ್ಬಿನ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಿರುವ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾರ್ಖಾನೆಯ ಆವರಣದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿದ ಕಾರ್ಖಾನೆಯ ಆಡಳಿತ ಮಂಡಳಿಯು ಧಾರ್ಮಿಕ ಚಿಂತಕ.

ಶ್ರೀರಂಗಪಟ್ಟಣದ ಡಾ.ಭಾನುಪ್ರಕಾಶ್ ಶರ್ಮಾ ಹಾಗೂ ಸಂಸ್ಕೃತಿ ಸಂಘಟಕ ಗೋಪಾಲಕೃಷ್ಣ ಅವಧಾನಿಗಳ ಆಗಮಿಕರ ತಂಡದ ನೇತೃತ್ವದಲ್ಲಿ.

ಗಣಪತಿ ಹೋಮವನ್ನು ನಡೆಸಿ, ವೇಬ್ರಿಡ್ಜ್, ಕಬ್ಬು ಅರೆಯುವ ಯಂತ್ರ ಹಾಗೂ ಕಾರ್ಖಾನೆಯ ಯಂತ್ರೋಪಕರಣಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಗಧಿಪಡಿಸುವ ಕಬ್ಬಿನ ದರವನ್ಮು ಪ್ರತೀ ಟನ್ ಕಬ್ಬಿಗೆ ನೀಡಲು ಕಾರ್ಖಾನೆಯ ಆಡಳಿತ ಮಂಡಳಿಯು ಬದ್ಧವಾಗಿದೆ.

ರೈತ ಬಾಂಧವರು ಎಂದಿನಂತೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕು ಎಂದು ರವಿರೆಡ್ಡಿ ಮನವಿ ಮಾಡಿದರು.

ಕಾರ್ಖಾನೆಯ ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕರಾದ ಕೆ.ಬಾಬೂರಾಜ್, ಪರ್ಸೋನಲ್ ಮ್ಯಾನೇಜರ್ ಪದ್ಮನಾಭ,

ತಾಲ್ಲೂಕು ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಗೌರವಾಧ್ಯಕ್ಷ ಕೆ.ಜೆ.ಅಣ್ಣಯ್ಯ,

ಪ್ರಗತಿಪರ ಕಬ್ಬು ಬೆಳೆಗಾರರಾದ ಬೋರಾಪುರ ಮಂಜುನಾಥ್, ನಾಟನಹಳ್ಳಿ ನಿಂಗೇಗೌಡ, ಕಾಯಿಮಂಜೇಗೌಡ, ಜಯರಾಮೇಗೌಡ,

ಚಟ್ಟಂಗೆರೆ ಬಿ.ನಾಗೇಶ್ ಮತ್ತು ಕಾರ್ಖಾನೆಯ ಅಧಿಕಾರಿಗಳು, ರೈತಬಾಂಧವರು ಕಬ್ಬು ಅರೆಯುವ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here