ರೈಲ್ವೆ ಪಾರ್ಸಲ್ ಪ್ರದೇಶ 99 ವರ್ಷಗಳ ಕಾಲ ಗುತ್ತಿಗೆಗೆ

0

ನಗರದ ಫ್ಲಾಟ್‍ಫಾರಂ ರಸ್ತೆಯಲ್ಲಿರುವ ರೈಲ್ವೆ ಪಾರ್ಸಲ್ ಪ್ರದೇಶವನ್ನು 99 ವರ್ಷಗಳ ಕಾಲ ಗುತ್ತಿಗೆಗೆ ನೀಡಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಪ್ಲಾಟ್‍ಫಾರಂನ ಪಾರ್ಸಲ್ ಕೇಂದ್ರದಲ್ಲಿ ಖಾಲಿ ಇರುವ 10,128 ಸುತ್ತಳತೆ ಪ್ರದೇಶವನ್ನು ಗುತ್ತಿಗೆಗೆ ನೀಡಲು ರೈಲ್ವೆ ಭೂಮಿ ಅಭಿವೃದ್ಧಿ ಪ್ರಾಧಿಕಾರ (ಆರ್‍ಎಲ್‍ಡಿಎ) ಬಿಡ್ ಕರೆದಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮತ್ತಿತರ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರೈಲ್ವೆ ಭೂಮಿಯನ್ನು 99 ವರ್ಷಗಳ ಗುತ್ತಿಗೆ ನೀಡಿ ಆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ರೈಲ್ವೆ ಇಲಾಖೆಯ ಉದ್ದೇಶವಾಗಿದೆ ಎಂದು ಆರ್‍ಎಲ್‍ಡಿಎ ಅಧ್ಯಕ್ಷ ವೇದ್ ಪ್ರಕಾಶ್ ದುಡೇಜಾ ತಿಳಿಸಿದ್ದಾರೆ.

ಬೆಂಗಳೂರು ಐಟಿ , ಬಿಟಿ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದ್ದು , ಆ ನಗರದ ಹೃದಯ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಭೂಮ್‍ನಲ್ಲಿರುವ ಸಂದರ್ಭದಲ್ಲಿ ಗುತ್ತಿಗೆ ನೀಡುವ ಪ್ರದೇಶದಲ್ಲಿ ಜನೋಪಯೋಗಿ ಸಂಕೀರ್ಣ ನಿರ್ಮಿಸಲು ಮುಂದೆ ಬರುವವರಿಗೆ ಗುತ್ತಿಗೆ ನೀಡಲು ಉದ್ದೇಶಿಸಲಾಗಿದೆ.

LEAVE A REPLY

Please enter your comment!
Please enter your name here