ಲಾಕ್ ಡೌನ್ ಸಡಿಲಿಕೆ ಬಳಿಕ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಸಾರ್ವಜನಿಕ ಸೇವೆಗೆ 10 ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಪ್ರಾರಂಭಿಸಲಿದೆ.
ಭಾರತೀಯ ರೈಲ್ವೆ ವಲಯದ ನೈಋತ್ಯ ವಿಭಾಗದಲ್ಲಿ ಸುಮಾರು 10 ವಿಶೇಷ ಎಕ್ಸ್ ಪ್ರೆಸ್ ರೈಲುಗಳು ಕಾರ್ಯಾರಂಭ ಮಾಡಲು ಸಿದ್ದಗೊಂಡಿದ್ದು, ಈ ಬಗ್ಗೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಶವಂತಪುರ-ಬಿಕಾನೇರ್ -ವಾರಕೊಮ್ಮೆ, ಮೈಸೂರು-ಸೊಲ್ಲಾಪುರ-ಪ್ರತಿದಿನ,ಯಶವಂತಪುರ-ಬಿಜಾಪುರ – ವಾರಕ್ಕೊಮ್ಮೆ, ಬೆಂಗಳೂರು-ದೆಹಲಿ -ಪ್ರತಿದಿನ, ಬೆಂಗಳೂರು-ಮೈಸೂರು -ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿವೆ.