ರೌಡಿ ಶೀಟರ್ ನನ್ನು ಹತ್ಯೆಗೈದು ಪಾರ್ಟಿಯಲ್ಲಿ ತೊಡಗಿದ್ದ ಆರೋಪಿಗಳು!
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ರೌಡಿ ಶೀಟರ್ ಮೇಲೆ ಪೈರಿಂಗ್!
ಆಂಕರ್: ಹಳೆ ವೈಶೆಮ್ಯೆ ಹಿನ್ನಲೆ ರೌಡಿ ಶೀಟರ್ ನೊರ್ವನನ್ನು ನಿನ್ನೆ ರಾತ್ರಿ ಮತ್ತೊಂದು ರೌಡಿ ಶೀಟರ್ ಗಳ ಪಡೆ ಅಟ್ಟಾಡಿಸಿ ಬರ್ಬರವಾಗಿ ಕೊಂದು ಹಾಕಿ, ಏನು ಗೊತ್ತಿಲ್ಲದ ಹಾಗೆ ನಿರ್ಜನ ಪ್ರದೇಶದಲ್ಲಿ ಪಾರ್ಟಿಯಲ್ಲಿ ತೊಡಗಿದ್ರು. ಆದ್ರೆ ನಟೋರಿಯಸ್ ಆರೋಪಿಗಳು ಛಾಪೆ ಕೆಳಗೆ ತೂರಿದ್ರೆ… ಪೊಲೀಸರು ರಂಗೋಲಿ ಕೆಳಗೆ ತೂರಿ ಆರೋಪಿಗಳನ್ನು ಬಂಧಿಸಿದ್ರು. ಆದ್ರೆ ಪೊಲೀಸರನ್ನೆ ತಳ್ಳಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ನ ಮೇಲೆ ಪೊಲೀಸರು ಪೈರಿಂಗ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ, 1. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಗ್ರಾಮಾಂತರ ಠಾಣೆ ರೌಡಿಶೀಟರ್ ಜಿ.ರಮೇಶನನ್ನು, ನಿನ್ನೆ ರಾತ್ರಿ ಪರಿಚಯಸ್ಥ ರೌಡಿ ಸೀಟರ್ ಗಳ ಪಡೆ… ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆ ಬಳಿ ಇರುವ ಕಾದಲವೇಣಿ ಅನ್ನೊ ಗ್ರಾಮದ ಬಳಿ, ಅಟ್ಟಾಡಿಸಿ ಸಿನಿಮೀಯ ರೀತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ರು. ನಂತರ ತಮಗೆ ಏನು ಗೊತ್ತಿಲ್ಲದ ಹಾಗೆ ಹಳೆ ಉಪ್ಪಾರಹಳ್ಳಿ ಗ್ರಾಮದ ನಿರ್ಜನ ಪ್ರದೇಶ ದಿನ್ನೆ ಬಳಿ ರಾತ್ರಿ ಪಾರ್ಟಿಯಲ್ಲಿ ತೊಡಗಿದ್ರು. ಆದ್ರೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು… ರೌಡಿ ಶೀಟರ್ ಗಳ ಅಡಗು ತಾಣ ಪತ್ತೆಯಚ್ಚೆ…. ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ರು. ಆದ್ರೆ ಅದರಲ್ಲಿದ್ದ ಉಪ್ಪಾರಹಳ್ಳಿ ಗ್ರಾಮದ ನಿವಾಸಿ ರೌಡಿ ಶೀಟರ್ ಅಂಬರಿಶ… ಪೊಲೀಸ್ ಕಾನಸ್ಟೇಬಲ್ ಮದು ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ, ಇದ್ರಿಂದ ಪೊಲೀಸ್ ಇನ್ಸಪೇಕ್ಟರ್ ನಯಾಜ್ ಬೇಗ್ ರೌಡಿ ಶೀಟರ್ ಅಂಬರೀಶ ಮೇಲೆ ಪೈರ್ ಮಾಡಿ ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ.
2- ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್, ಪೊಲೀಸ್ ಉಪಾದೀಕ್ಷಕ ರವಿಶಂಕರ್ ಗಾಯಾಳುಗಳನ್ನು ದಾಖಲು ಮಾಡಿರುವ ಗೌರಿಬಿದನೂರು ತಾಲೂಕು ಆಸ್ಪತ್ರೆ ಹಾಗೂ ಪೈರ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಮತ್ತೊಂದೆಡೆ ರೌಡಿ ಶೀಟರ್ ಜಿ. ರಮೇಶ, ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆ.ಡಿ.ಎಸ್ ಕಾರ್ಯಕರ್ತ ರಾಮೀರೆಡ್ಡಿ ಯನ್ನು ಹತ್ಯೆ ಗೈದಿದ್ದ ಕಾರಣ ಸೇಡು ತೀರಿಸಿಕೊಳ್ಳಲು ಮೃತನ ಸ್ನೇಹಿತ ಅಂಬರೀಶ ಸೂಚನೆ ಮೇರೆಗೆ, ಟಿ.ರಮೇಶ, ಜಂಗ್ಲಿ ಅಲಿಯಾಸ್ ರೆಡ್ಡಿ, ಅರ್ಜುನ್ ಹಾಗೂ ವೆಂಕಟೇಶ ಅನ್ನೊ ನಾಲ್ಕು ಜನ ಸೇರಿಕೊಂಡು ರೌಡಿ ಶೀಟರ್ ನನ್ನು ಹತ್ಯೆ ಗೈದಿರುವುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ, ಆದ್ರೆ ಇತ್ತ ಮೃತನ ಪತ್ನಿ ಒಂದು ತಿಂಗಳ ಬಾಣಂತಿ ಇದ್ದು… ಗಂಡನ ಹತ್ಯೆಯಿಂದ ಕಂಗಲಾಗಿದ್ದಾಳೆ. ಆದ್ರೆ ಮೃತ ರಮೇಶ ಅಣ್ಣ ಅಶ್ವತ್ಥನಾರಾಯಣ ಮಾತ್ರ ತಮ್ಮನ ಕೊಲೆಯಲ್ಲಿ ಸ್ಥಳಿಯ ರಾಜಕೀಯಿದೆ, ತಮಗೆ ನ್ಯಾಯ ಕೊಡಿಸುವಂತೆ ಅಂಗಲಾಗಿದ.
3-ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆ.ಡಿ.ಎಸ್ ಕಾಂಗ್ರೆಸ್ ಅಂತ ಗ್ಯಾಂಗ್ ಮಾಡಿಕೊಂಡು ಪುಡಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ರು. ಅಂದು ರಾಮೀರೆಡ್ಡಿಯನ್ನು ಕೊಮದು ಜೈಲು ಸೇರಿದ್ದ ರೌಡಿ ಶೀಟರ್ ಜಿ.ರಮೇಶ ಇತ್ತಿಚಿಗೆ ತಾನೆ ಜೈಲಿನಿಂದ ಆಚೆ ಬಂದು ರೌಡಿಸಂ ಸಹವಾಸ ಬೇಡ ಅಂತ ಮನೆಯಲ್ಲಿದ್ದ, ಆದ್ರೆ ಆತನ ಬರ್ತಡೆ ದಿನವೇ ರೌಡಿ ಶೀಟರ್ ಗಳು ಆತನ ಕಥೆ ಮುಗಿಸಿದ್ದು ರೌಡಿಸಂನ ದ್ವೇಷಕ್ಕೆ ಸಾಕ್ಷಿಯಾಗಿದೆ.