ಲಕ್ಕಿ ಡ್ರಾ: ಯುಎಇಯಲ್ಲಿ 19.90 ಕೋಟಿ ಗೆದ್ದ ಭಾರತೀಯ!

0

ಅಬುಧಾಬಿಯಲ್ಲಿ ನಡೆದ ರಾಫಲ್ ಡ್ರಾನಲ್ಲಿ 35 ವರ್ಷದ ಭಾರತೀಯ ವ್ಯಕ್ತಿಯೊಬ್ಬರು 19.90 ಕೋಟಿ ಜಾಕ್‌ಪಾಟ್ ಗೆದ್ದಿದ್ದಾರೆ. ಇದು ಭಾರತದ ಅದೃಷ್ಟ ವಿಜೇತರ ದೀರ್ಘ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಮೂಲತಃ ಪಂಜಾಬ್ ಮೂಲದವರು ಮತ್ತು ಶಾರ್ಜಾದಲ್ಲಿ ಐಟಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಗುರ್‌ಪ್ರೀತ್ ಸಿಂಗ್ ಅವರು ಆಗಸ್ಟ್ 12ರಂದು ಲಕ್ಕಿ ಟಿಕೆಟ್ ಸಂಖ್ಯೆ 067757 ಅನ್ನು ಖರೀದಿಸಿದ್ದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಸೆಪ್ಟೆಂಬರ್ 3ರಂದು ಸಿಂಗ್ ಅವರಿಗೆ ರಾಫಲ್ ಡ್ರಾ ಸಂಘಟಕರು ಕರೆ ಮಾಡಿದ್ದರು. ಈ ವೇಳೆ ನೀವು ವಿಜೇತರಲ್ಲಿ ಒಬ್ಬರು ಎಂದು ಹೇಳಿದಾಗ, ಇದು ತಮಾಷೆಯ ಕರೆ ಎಂದು ಭಾವಿಸಿದ್ದೆ ಎಂದು ಗುರುಪ್ರೀತ್ ಸಿಂಗ್ ಹೇಳಿದ್ದಾರೆ.

ಸಿಂಗ್ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಿಗ್ ಟಿಕೆಟ್ ರಾಫೆಲ್‌ನಲ್ಲಿ ಭಾಗವಹಿಸುತ್ತಿದ್ದಾರೆ ಆದರೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಡ್ರಾವನ್ನು ಲೈವ್ ಆಗಿ ಅನುಸರಿಸುತ್ತಿರಲಿಲ್ಲವಂತೆ.

ಜಾಕ್‌ಪಾಟ್ ಹಣದಿಂದ ಯುಎಇಯಲ್ಲಿ ಒಂದು ಮನೆಯನ್ನು ಖರೀದಿಸುತ್ತೇನೆ. ನಂತರ ಪೋಷಕರನ್ನು ಪಂಜಾಬ್‌ನಿಂದ ಕರೆತರಲು ಪ್ರಯತ್ನಿಸುತ್ತೇನೆ. ಈ ಮೂಲಕ ಕುಟುಂಬದೊಂದಿಗೆ ಇರುವ ಆಸೆಯನ್ನು ಗುರುಪ್ರೀತ್ ಹೊಂದಿದ್ದಾರೆ.

ಇದೇ ವೇಳೆ ಲಕ್ಕಿ ಡ್ರಾದಲ್ಲಿ ಪ್ರತಿಯೊಬ್ಬರೂ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಲೇ ಇರಬೇಕೆಂದು ಸಿಂಗ್ ಒತ್ತಾಯಿಸಿದರು.

LEAVE A REPLY

Please enter your comment!
Please enter your name here