ಲಾಲ್ ಬಹದ್ದೂರ್ ಶಾಸ್ತ್ರಿಯವರ ಫಿಯೆಟ್ ಕಾರು…!

0

ಅದು 1965 ನೇ ಇಸವಿ.
ಆಗ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು.

ಶಾಸ್ತ್ರಿ ಅವರಲ್ಲಿ ಸ್ವಂತದ್ದಾದ ಕಾರು ಇರಲಿಲ್ಲ. ಅವರ ಮನೆಯವರ ಒತ್ತಾಸೆಗೆ ಮಣಿದು ಕಾರು ಖರೀದಿಸಲು ಮುಂದಾದರು. ಆಗ ನಮ್ಮ ದೇಶದಲ್ಲಿ ಈಗಿನಂತೆ ವೈವಿಧ್ಯಮಯ ಕಾರುಗಳು ತಯಾರಾಗುತ್ತಿರಲಿಲ್ಲ. ಭಾರತದಲ್ಲಿ ತಯಾರಾಗುತ್ತಿರುವ ಕಾರುಗಳೆಂದರೆ ಅಂಬಾಸಡರ್ ಮತ್ತು ಫಿಯಟ್.

ಫಿಯೆಟ್ ಕಾರಿನ ಬೆಲೆ ಎಷ್ಟೆಂದು ಕೇಳಿದರು.
ಆವಾಗ ಕಾರಿನ ದರ 12,000/- ರೂಪಾಯಿ.
ಆದರೆ ಶಾಸ್ತ್ರಿ ಅವರ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ 7,000/- ರೂಪಾಯಿ.
ಉಳಿದ 5,000/- ಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಲೋನ್ ಗೆ ಅಪ್ಲೈ ಮಾಡಿದರು.

ಬ್ಯಾಂಕ್ ಕೇವಲ ಒಂದೂವರೆ ಗಂಟೆಯಲ್ಲಿ ಲೋನ್ ಸ್ಯಾಂಕ್ಷನ್ ಮಾಡಿತು.
ಆದರೆ ಈ ನಿಯಮವನ್ನು ಒಪ್ಪಿಕೊಳ್ಳದ ಪ್ರಧಾನಿ ಶಾಸ್ತ್ರಿ ಸಾಮಾನ್ಯರಿಗೆ ಮಾಡುವಂತೆ ಬ್ಯಾಂಕ್ ಮೀಟಿಂಗ್ ನಲ್ಲಿ ಪಾಸ್ ಮಾಡಿ ಕ್ಯೂ ಪ್ರಕಾರ ಲೋನ್ ನೀಡಿ.
ಅದೇ ನಿಯಮದ ಪ್ರಕಾರ ಲೋನ್ ಕಟ್ಟುತ್ತೇನೆ.
ನಾನು ಪ್ರಧಾನಿಯೆಂದು ವಿನಾಯಿತಿ ಬೇಡ ಎಂದರು. ಬ್ಯಾಂಕ್ ಮತ್ತೆ ಅದೇ ರೀತಿ ಪ್ರೊಸೆಸ್ ನ್ನು ಮುಂದುವರೆಸಿತು.
ನಂತರದ ದಿನಗಳಲ್ಲಿ ಲೋನ್ ಸಹಿತ ಕಾರು ಶಾಸ್ತ್ರಿಯವರ ಅಂಗಳಕ್ಕೆ ಬಂತು.

1966 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮರಣವನ್ನಪ್ಪಿದರು.
ಬ್ಯಾಂಕ್ ನಿಂದ ಅವರ ಪತ್ನಿ ಲಲಿತಾ ಶಾಸ್ತ್ರಿ ಅವರಿಗೆ ಲೋನ್ ಪಾವತಿಸುವಂತೆ ಪತ್ರ ಬಂತು.
ಪತ್ನಿ ತನ್ನ ಕುಟುಂಬದ ಪೆನ್ ಷನ್ ಮೊತ್ತದಲ್ಲಿ ತಿಂಗಳು ತಿಂಗಳು ಪಾವತಿಸುತ್ತೇನೆಂದು ಬ್ಯಾಂಕ್ ಗೆ ಮನವಿ ಮಾಡಿದರು.
ಅದರಂತೆ ಪಾವತಿಸಿ ಲೋನ್ ಮುಗಿಸಿದರು ಕೂಡಾ.
ಆ ಫಿಯೆಟ್ ಕಾರು ಈಗಲೂ ಶಾಸ್ತ್ರೀಜಿ ಮನೆಯಲ್ಲಿದೆ.

ಸರಕಾರಿ ಸೇವಕ

ಶಾಸ್ತ್ರಿಯವರ ಪುತ್ರ ಉದ್ಯೋಗಕ್ಕಾಗಿ ಇಲಾಖೆಯೊಂದಕ್ಕೆ ಅರ್ಜಿ ಹಾಕಿದ್ದರು.
ಈ ಹಿಂದೆ ಮಗನನ್ನು ಸೈಂಟ್ ಸ್ಟೀಫನ್ ಕಾಲೇಜಿಗೆ ಸೇರಿಸುವಾಗ ಫಾರ್ಮ್ ನಲ್ಲಿ ತಂದೆಯ ವೃತ್ತಿ ಕಾಲಂನಲ್ಲಿ “ಸರಕಾರಿ ಸೇವಕ” ಅಂತ ಶಾಸ್ತ್ರಿ ನಮೂದಿಸಿದ್ದರು.
ಉದ್ಯೋಗದ ದಾಖಲಾತಿಗಾಗಿ ಸಾಮಾನ್ಯರೊಂದಿಗೆ ಕ್ಯೂನಲ್ಲಿ ನಿಂತಿದ್ದ ಶಾಸ್ತ್ರಿ ಪುತ್ರ ತಮ್ಮ ಸರದಿ ಬಂದಾಗ ಕಾಲೇಜು ಸರ್ಟಿಫಿಕೇಟ್ ಪರಿಶೀಲಿಸಿದ ಇಲಾಖೆಯ ಕ್ಲಾರ್ಕ್ ತಂದೆಗೇನು ಸರಕಾರಿ ಕೆಲಸ ಎಂದು ಪುತ್ರನಲ್ಲಿ ಪ್ರಶ್ನಿಸಿದರು.
ಮಗ ನನ್ನ ತಂದೆ ದೇಶದ ಪ್ರಧಾನ ಮಂತ್ರಿ ಅಂದಾಗ ಕ್ಲಾರ್ಕ್ ಬೆಚ್ಚಿಬಿದ್ದರು.

ಅಂತಹ ಸರಳ ವ್ಯಕ್ತಿತ್ವ ದೇಶದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರದ್ದಾಗಿತ್ತು.
ಅವರ ಮನೆಯವರಿಗೂ ಅಂತಹುದೇ ಸರಳ ಜೀವನವನ್ನು ಕಲಿಸಿದ್ದರು.

ಆದರೆ ಇವತ್ತಿನ ರಾಜಕಾರಣಿಗಳ ಅವಸ್ಥೆಯನ್ನು ಒಮ್ಮೆ ಹೋಲಿಸಿ ನೋಡಿ. ಲಾಲ್ ಬಹಾದೂರ್ ಶಾಸ್ತ್ರಿ ಅವರ ಜೀವನ ಶೈಲಿಯನ್ನು ಹೇಳಿದ್ದಲ್ಲಿ ಈಗಿನ ತಲೆಮಾರಿನ ಜನರಿಗೆ ಅದೊಂದು ಕಟ್ಟು ಕಥೆ ಎನಿಸಬಹುದು.

LEAVE A REPLY

Please enter your comment!
Please enter your name here