ಲಿಂಗಾಯತ 3A ಹಾಗೂ 3B ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಸಾಧ್ಯವಾಗದಿರುವ ಬಗ್ಗೆ, 1500 ರಷ್ಟು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

0

ಜವಾಹರ್ ನವೋದಯ ವಿದ್ಯಾಲಯ ಸಮಿತಿಯ 6ನೇ ತರಗತಿಗೆ ಓಬಿಸಿ (ಲಿಂಗಾಯತ 3A ಹಾಗೂ 3B) ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಸಾಧ್ಯವಾಗದಿರುವ ಬಗ್ಗೆ, 1500 ರಷ್ಟು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಜವಾಹರ್ ನವೋದಯ ವಿದ್ಯಾಲಯ ಶಾಲೆ ಪ್ರಾರಂಭ ಆದಾಗಿಂದಲೂ ಇಲ್ಲಿಯವರೆಗೂ ಮೀಸಲಾತಿ ಇದ್ದದ್ದು, ಎಸ್.ಸಿ,.ಎಸ್.ಟಿ, ದಿವ್ಯಾಂಗ, ಗ್ರಾಮೀಣ ಪ್ರದೇಶ ದವರಿಗೆ ಮಾತ್ರ ಇದ್ದದ್ದು ಹಾಗೆಯೇ 2019-20ರ ಶೈಕ್ಷಣಿಕ ವರ್ಷದಲ್ಲಿ ಅಧಿಸೂಚನೆಯನ್ನು 2020-21 ನೇ ಸಾಲಿಗಾಗಿ ಪ್ರಕಟಿಸಿದಾಗಲೂ ಇಷ್ಟೇ ಮೀಸಲಾತಿ ತಿಳಿಸಿದ್ದೂ ಅಲ್ಲದೇ ಓ.ಬಿ.ಸಿ. ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟೀಕರಣ ಎಲ್ಲಿಯೂ ನೀಡಿರುವುದಿಲ್ಲ. ಆದರೆ ಮಾರ್ಚ ಮತ್ತು ಜೂನ್ ತಿಂಗಳಲ್ಲಿ ಪ್ರವೇಶ ಪರೀಕ್ಷೆಯ ಫಲಿತಾಂಶ ಬಂದ ನಂತರ ಓ.ಬಿ.ಸಿ ಪ್ರಮಾಣ ಪತ್ರವು ಕೇಂದ್ರ ಮಾದರಿಯಲ್ಲಿರಬೇಕು ಎಂದು ನಮೂನೆಯನ್ನು ತಿಳಿಸಿರುತ್ತಾರೆ. ಹಾಗಾಗಿ ಅರ್ಜಿ ಸಲ್ಲಿಸುವಾಗ ಓ.ಬಿ.ಸಿ.ಮೀಸಲಾತಿ ಇರುವುದಿಲ್ಲವಾದ್ದರಿಂದ ಮತ್ತು ಶಾಲೆ ಪ್ರಾರಂಭದಿಂದ ಇಲ್ಲಿಯವರೆಗೂ ರಾಜ್ಯ ಸರ್ಕಾರದ ಓ.ಬಿ.ಸಿ ಪ್ರಮಾಣ ಪತ್ರ ಸ್ವೀಕರಿಸಿರುವುದರಿಂದ ಬಹುತೇಕ ಪಾಲಕರು ತಮ್ಮ ತಮ್ಮ ಜಾತಿಗಳು ಓ.ಬಿ.ಸಿ ಯಲ್ಲಿಬರುತ್ತವೆಂದು ಅರ್ಜಿಯಲ್ಲಿ ನಮೂದಿಸಿರುತ್ತಾರೆ ..ಆದರೆ ಈಗ ಕೇಂದ್ರಸರಕಾರದ ಓಬಿಸಿ ನಮೂನೆ ಕೇಳುತ್ತಿರುವುದು, ಕೆಲವು ಜಾತಿಗಳು ಇದರಲ್ಲಿ ಬರದೇ ಇರುವುದು ಪಾಲಕರಿಗೆ ಗೊಂದಲ ಮೂಡಿಸಿದ್ದಲ್ಲದೇ ಮಕ್ಕಳಿಗೆ ಮಾನಸಿಕ ಹಿಂಸೆಯನ್ನು ನೀಡಿದಂತಾಗಿದೆ.ಮಕ್ಕಳು ನಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಬಂದರೆ ಸಾಕು ನಾವು ಪ್ರವೇಶ ಪಡೆದ ಹಾಗೆಯೇ ಎಂದುಕೊಂಡು ಸಿಹಿ ಹಂಚಿ ಸಂಭ್ರಮಿಸಿರುವಾಗ ..ಈಗ ನಿಮ್ಮನ್ನು ಜಾತಿ ಕಾರಣಕ್ಕಾಗಿ ತಿರಸ್ಕರಿಸಲಾಗುತ್ತದೆ ಎನ್ನುವ ವಿಷಯ ತಿಳಿದು ಖಿನ್ನತೆ ಗೊಳಗಾಗುತ್ತಿದ್ದಾರೆ. ಜವಾಹರ್ ನವೋದಯ ವಿದ್ಯಾಲಯ ಸಮಿತಿ ಸ್ಥಾಪನೆಯ ಉದ್ದೇಶ ಗ್ರಾಮೀಣ ಪ್ರದೇಶದ ಪ್ರತಿಭಾವಂತ‌ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವುದು. ಆದರೆ ಅದೇ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಜಾತಿ ಮೀಸಲಾತಿಯ ನೆಪವೊಡ್ಡಿ …(ಇದೂವರೆಗೂ ಇದ್ದ ಗ್ರಾಮೀಣ ಪ್ರದೇಶದ ಮೀಸಲಾತಿ ಯಲ್ಲಿ ಕಡಿತ ಮಾಡಿ ) ಅತ್ಯಂತ ಕಠಿಣ ಪ್ರವೇಶ ಪರೀಕ್ಷೆ ಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ತಿರಸ್ಕರಿಸುತ್ತಿರುವುದು ಯಾವ ನ್ಯಾಯ?…

#ಪ್ರಶಾಂತ್ಕಲ್ಲೂರ್ #ವೀರಶೈವಲಿಂಗಾಯತಯುವವೇದಿಕೆ #vlyvedike #ನವೋದಯ_ವಿದ್ಯಾಲಯ

LEAVE A REPLY

Please enter your comment!
Please enter your name here