ಲಿವಿಂಗ್ ರಿಲೇಷನ್‍ಶಿಪ್‍: ದಂತವೈದ್ಯೆ ಮಹಿಳೆಯ ಹೊಟ್ಟೆ ಬಗಿದು ಬರ್ಬರ ಹತ್ಯೆ, ಆರೋಪಿ ಬಂಧನ!

0

ದಂತವೈದ್ಯೆಯ ಜೊತೆ ಎರಡು ವರ್ಷಗಳಿಂದ ಲಿವ್ ಇನ್ ಪಾರ್ಟ್ನರ್ ನಲ್ಲಿದ್ದ ವ್ಯಕ್ತಿಯೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.

ಕೇರಳದ ಎರ್ನಾಕುಲಂನಲ್ಲಿ ಸೆಪ್ಟೆಂಬರ್ 28ರಂದು 30 ವರ್ಷದ ಸೋನಾ ಜೋಸ್ ಎಂಬುವರನ್ನು 39 ವರ್ಷದ ಮಹೇಶ್ ಚಾಕುವಿನಿಂದ ಇರಿದಿದ್ದ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋನಾ ಮೃತಪಟ್ಟಿದ್ದರು.

ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಮಹೇಶ್ ನನ್ನು ಬಂಧಿಸಿದ್ದಾರೆ. ಸೋನಾ ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಸೋನಾ ಒಂದೂವರೆ ವರ್ಷದಿಂದ ತ್ರಿಶೂರ್ ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು.

ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಸೋನಾರನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

LEAVE A REPLY

Please enter your comment!
Please enter your name here