ವಂದೇ ಭಾರತ್ ವಿಮಾನದಲ್ಲಿ ಬರುವವರಿಗೆ ಎಸ್‌ಒಪಿ ಹೊರಡಿಸಿದ ಕೇಂದ್ರ ಸರಕಾರ

0

ವಂದೇ ಭಾರತ್ ಯೋಜನೆ ಹಾಗೂ ವಾಯು ಸಾರಿಗೆ ಬಬಲ್ ಅಡಿ (ರಾಷ್ಟ್ರಗಳ ನಡುವಿನ ತಾತ್ಕಾಲಿಕ ವಿಮಾನ ಯಾನ ಒಪ್ಪಂದ) ಪ್ರಯಾಣಿಸುವ ಪ್ರಯಾಣಿಕರಿಗೆ ಗುಣಮಟ್ಟ ಕಾರ್ಯನಿರ್ವಹಣೆ ವಿಧಾನ (ಎಸ್‌ಒಪಿ)ಗಳನ್ನು ನಿಗದಿಪಡಿಸಿ ಕೇಂದ್ರ ಸಚಿವಾಲಯ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.

ವಂದೇ ಭಾರತ್ ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲು ಬಯಸುವವರು ಆಯಾ ದೇಶದಲ್ಲಿರುವ ಭಾರತದ ರಾಯಬಾರಿ ಕಚೇರಿಯಲ್ಲಿ ತಮ್ಮ ಹೆಸರು ಹಾಗೂ ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು. ಆದರೆ, ವಾಯು ಸಾರಿಗೆ ಬಬಲ್ ಅಡಿಯಲ್ಲಿ ಪ್ರಯಾಣಿಸುವವರು ಈ ರೀತಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.

ವಾಯು ಸಂಚಾರ ಅಥವಾ ವಿಮಾನ ಸಂಚಾರಕ್ಕೆ ಭಾರತ ಜುಲೈಯಿಂದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಯುಎಇ, ಕತರ್ ಹಾಗೂ ಮಾಲ್ಡಿವ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರೇಲಿಯಾ, ಇಟಲಿ, ಜಪಾನ್, ನ್ಯೂಝಿಲ್ಯಾಂಡ್, ನೈಜೀರಿಯಾ, ಬಹ್ರೈನ್, ಇಸ್ರೇಲ್, ಕೆನ್ಯಾ, ಪಿಲಿಪ್ಪೈನ್ಸ್, ರಶ್ಯ, ಸಿಂಗಪುರ, ದಕ್ಷಿಣ ಕೊರಿಯಾ ಹಾಗೂ ಥಾಲ್ಯಾಂಡ್‌ನೊಂದಿಗೆ ಕೂಡ ಈ ವ್ಯವಸ್ಥೆ ಮಾಡಿಕೊಳ್ಳಲು ಭಾರತ ಸರಕಾರ ಮಾತುಕತೆ ನಡೆಸುತ್ತಿದೆ.

ವಂದೇ ಮಾತರಂ ಅಭಿಯಾನ ಮೇ 6ರಂದು ಆರಂಭವಾಗಿತ್ತು. ಈಗ ಇದು 6ನೇ ಹಂತದಲ್ಲಿ ಇದೆ.

LEAVE A REPLY

Please enter your comment!
Please enter your name here