‘ವಡಾ ಪಾವನ್ನು ಸೋಲಿಸಲಿದೆ ಇಡ್ಲಿ’: ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಸೆಹ್ವಾಗ್​ ಟ್ವೀಟ್​

0

ಅರಬ್ಬರ ನಾಡು ಅಬುಧಾಬಿಯಲ್ಲಿ ಐಪಿಎಲ್​ ಶುರುವಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಿನ್ನೆ ಶೇಖ್​ ಝಾಯೆದ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ತಂಡ ಮೇಲುಗೈ ಸಾಧಿಸಿದೆ.

ಈ ಮೂಲಕ, ಐಪಿಎಲ್​ಗೆ ರೋಚಕ ಆರಂಭ ಸಿಕ್ಕಿದ್ದು, ಚೆನ್ನೈ ತಂಡ ಗೆಲುವಿನ ನಗೆ ಬೀರುತ್ತಿದೆ. ಚೆನ್ನೈ ತಂಡ ಮೇಲುಗೈ ಸಾಧಿಸುತ್ತಲೇ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್​ ಒಂದನ್ನು ಮಾಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಅವರು ಬರೆದದ್ದು ಏನೆಂದರೆ ‘Idli beats Vada Pav again’ ( ವಡಾ ಪಾವನ್ನು ಇಡ್ಲಿ ಇನ್ನೊಮ್ಮೆ ಸೋಲಿಸಲಿದೆ) ಎಂದಿದ್ದಾರೆ. ಚೆನ್ನೈನಲ್ಲಿ ಇಡ್ಲಿ ಪ್ರಸಿದ್ಧವಾಗಿದ್ದರೆ, ಮುಂಬೈ ಸೇರಿದಂತೆ ಉತ್ತರ ಭಾರತದ ಹಲವೆಡೆಗಳಲ್ಲಿ ವಡಾಪಾವ್​ ಫೇಮಸ್​. ಅದಕ್ಕಾಗಿಯೇ ಚೆನ್ನೈನೇ ಇನ್ನು ಮುಂದೆಯೂ ಗೆಲುವು ಸಾಧಿಸಲಿದೆ ಎನ್ನುವ ಗೂಡಾರ್ಥವನ್ನು ಈ ಟ್ವೀಟ್​ ಒಳಗೊಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ಚೆನ್ನೈ ತಂಡಕ್ಕೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 163ರ ಗುರಿಯನ್ನು ಬಿಟ್ಟು ಕೊಟ್ಟಿತ್ತು. ಚೆನ್ನೈ ತಂಡ 19.2 ಓವರ್​ನಲ್ಲಿ 5 ವಿಕೆಟ್ ನಷ್ಟದೊಂದಿಗೆ 166 ರನ್ ಗಳಿಸಿ ಜಯ ಸಾಧಿಸಿದೆ.

ವೀರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರು. ಇವರು ಮಾಡುವ ಟ್ವೀಟ್​ಗಳು ಸಾಧಾರವಣವಾಗಿ ವೈರಲ್​ ಅಗುತ್ತಲೇ ಇರುತ್ತವೆ. ಇದೀಗ ಐಪಿಎಲ್​ನ ಮೊದಲ ಪಂದ್ಯದ ಬಳಿಕ ಈ ರೀತಿ ಟ್ವೀಟ್​ ಮಾಡಿದ್ದು, ಅದೀಗ ಸಾಕಷ್ಟು ಶೇರ್​ಗಳನ್ನು ಕಾಣುತ್ತಿವೆ.

ಸೆಹ್ವಾಗ್​ ಅವರು ತಮ್ಮ ಟ್ವೀಟ್​ನಲ್ಲಿ ‘ಐಪಿಎಲ್​ಗೆ ಅದ್ಭುತ ಆರಂಭ ಸಿಕ್ಕಿದೆ. ಪಂದ್ಯದ ಉದ್ದಕ್ಕೂ ಇದೇ ರೀತಿಯ ರೋಚಕ ಮುಂದುವರೆಯುವ ಸಾಧ್ಯತೆಯಿದೆ. ರಾಯುಡ್ ಹಾಗೂ ಡುಪ್ಲೆಸಿಸ್ ಅದ್ಭುತವಾಗಿ ಆಡಿದ್ದಾರೆ. ಆದರೆ ಕಡೆಯಲ್ಲಿ ಬಂದ ಸ್ಯಾಮ್ ಕರನ್ ಆಟ ಭಿನ್ನವಾಗಿತ್ತು ಎಂದು ಪ್ರಶಂಸೆ ಮಾಡಿ. ಕೊನೆಯಲ್ಲಿ Idli beats Vada Pav again’ ಎಂದಿದ್ದಾರೆ.

LEAVE A REPLY

Please enter your comment!
Please enter your name here