ವನಕಲ್ಲು ಮಠದ ಪೂಜ್ಯರಿಗೆ ಒಲಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯ

0

ಈ ನಾಡಿನ ಧಾರ್ಮಿಕ ಪರಂಪರೆಯಲ್ಲಿ ಮಠ-ಪೀಠಗಳ ಕೊಡುಗೆ ಅನನ್ಯವಾದುದು. ಅನ್ನ, ಅಕ್ಷರ, ಅರಿವಿನ ಮಹಾಮನೆಗಳಾಗಿ ಬೆಳಗು, ಬೆಳಗಿಹುತ್ತಿವೆ. ಸಮಾಜದ ಅವಿಭಾಜ್ಯ ಅಂಗ ಈ ಮಠಗಳು. ವಿವಿಧ ಸಂವರ್ದನೆಗಳಲ್ಲಿ ಗುರುತಿಸಿಕೊಂಡು ಪರಂಪರೆಗಳನ್ನು ಎತ್ತಿ ಹಿಡಿಯುವುದರ ಮೂಲಕ, ನಾಡಿನ ತುಂಬೆಲ್ಲ ಸಂಚರಿಸಿ ಧರ್ಮ ಪ್ರಸಾರಗೈಯುತ್ತಿವೆ.
ಕಾಲಕಾಲಕ್ಕೆ ಈ ನಾಡಿನಲ್ಲಿ ಅವತರಿಸಿದ ತಪೋಪುಂಗವರು, ಶರಣರು, ಸಂತರು, ಮಹಾಂತರು ತಮ್ಮ ಪಾದಸ್ಪರ್ಶದಿಂದ ಇಲ್ಲಿಯ ನೆಲ-ಜಲ-ಗಾಳಿ ಗಂಧವನ್ನು ಪಾವನಗೊಳಿಸಿದ್ದಾರೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮನ್ನೇ ಸಮರ್ಥಿಸಿಕೊಂಡಿದ್ದಾರೆ. ದೇವರು-ಧರ್ಮದ ಬಗೆಗೆ ಕೇವಲ ಅಂಧವಿಸ್ವಾಸವನ್ನೇ ಇರಿಸಿಕೊಂಡಿದ್ದ ಶ್ರೀಸಾಮಾನ್ಯರಿಗೂ ವೈಚಾರಿಕ ಅರಿವನ್ನು ಮೂಡಿಸಿದ ಶ್ರೇಯಸ್ಸು ಬಸವಾದಿ ಪ್ರಮಥರಿಗೆ ಸಲ್ಲುತ್ತದೆ.
ಅಂತಹ ಯೋಗಿವರ್ಯರ ಪರಂಪರೆಯಲ್ಲಿ
ನೆಲಮಂಗಲ ತಾಲೂಕಿನ ಶ್ರೀ ವನಕಲ್ಲು ಮಠದ ಡಾ. ಶ್ರೀ ಬಸವ ರಮಾನಂದ ಮಹಾಸ್ವಾಮಿಗಳವರು ಒಬ್ಬರು. ಪೂಜ್ಯರ ಕಾಯಕ ಬಸವಾದಿ ಶಿವ ಶರಣರು ಅಹುದೆನ್ನುವಂತೆ ಇವೆ. ಗೈದ ಸಾಧನೆ, ಮಾಡುತ್ತಿರುವಂತಹ ಕಾರ್ಯ ಅಮೋಘವಾದುದು.
ಈಚೆಗೆ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವುದು ಭಕ್ತಕೋಟಿಗೆ ಅಪಾರ ಹರ್ಷವನ್ನು ತಂದಿದೆ. ಪೂಜ್ಯರು ನಾಡವರು ಕಂಡ ಮಹಾಚೇತನ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಸ್.ಕೆ ಹಳ್ಳಿಯಲ್ಲಿ ಜೂನ್ 23, 1988ರಲ್ಲಿ ಸುಸಂಸ್ಕೃತ ಮನೆತನದ ತಂದೆ ಈಶ್ವರಯ್ಯ, ತಾಯಿ ಕವನಮ್ಮರಿಗೆ ಜನಿಸಿದರು. ಹತೊಂಭತ್ತನೇಯ ವಯಸ್ಸಿನಲ್ಲಿಯೆ ಆಧ್ಯಾತ್ಮದ ಕಡೆಗೆ ಮನಸ್ಸು ಹಾತೊರೆಯಿತು. ಬಿ.ಎ. ಎಸ್.ಕೆ.ಹೆಚ್ (ಎಸ್.ಜೆ.ಎಂ.ಕಾಲೇಜ್); ಬಿಇಡಿ (ಬೆಂ.ವಿ.ವಿ); ಬಸವತತ್ವ ಡಿಗ್ರಿ (ಶ್ರೀಮುರುಘ ರಾಜೇಂದ್ರ ಬೃಹನ್ಮಠ ಚಿತ್ರದುರ್ಗ); ಕನ್ನಡ ಎಂ.ಎ. (ಹಂಪಿ ವಿ.ವಿ); ಎಂಪಿಲ್ (ಹಂ.ವಿ.ವಿ); ಇಂಗ್ಲಿಷ್ ಎಂ.ಎ (ಮೈಸೂರು.ವಿ.ವಿ); ಸೋಷಿಯಾಲಜಿ ಎಂ.ಎ. (ಬೆಂ.ವಿ.ವಿ); ಇತಿಹಾಸ ಎಂ.ಎ. (ಕುವೆಂಪು ವಿ.ವಿ); ಸಂಸ್ಕೃತ ಸಾಹಿತ್ಯ, ಸಂಸ್ಕೃತ ವೇದಮೂಲ, ಸಂಸ್ಕೃತ ಪ್ರವಾರ ಮತ್ತು ಪ್ರವೀಣ, ಸಂಸ್ಕೃತ ವಿದ್ವತ್ತು, ಶಕ್ತಿ ವಿಶಿಷ್ಟಾದ್ವೈತ (ಶ್ರೀ ಸಿದ್ಧಗಂಗಾ ಮಠ); ಸಂಸ್ಕೃತ ಎಂ.ಎ. (ಸಂಸ್ಕೃತ ವಿ.ವಿ); ಪಿ.ಹೆಚ್.ಡಿ ಸಂಶೋಧಕರು (ಮೈ.ವಿ.ವಿ) ಹೀಗೆ ಶ್ರೀಗಳು ನಿರಂತರ ಅಧ್ಯಯನ ಶೀಲರಾಗಿದ್ದಾರೆ.
ಶ್ರೀ ವನಕಲ್ಲು ಮಠದಲ್ಲಿ ಸಂಸ್ಕೃತ ವೇದ ಪಾಠಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಸ್ಥಾಪಿಸಿ ನೂರಾರು ಅನಾಥ ಮಕ್ಕಳು, ವೃದ್ಧರು ಮತ್ತು ಗೋವುಗಳಿಗೆ ಆಶ್ರಯದಾತರಾಗಿ ಅನ್ನ, ಅಕ್ಷರ, ಆಹಾರ, ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ಮಠದ ಆಸ್ತಿಯಲ್ಲಿ ತಾವೇ ಉತ್ತಿ, ಬಿತ್ತಿ ಬೆಳೆದು ಈ ಭಾಗದ ರೈತರಿಗೆ ಮಾದರಿಯಾಗುವ ಮೂಲಕ ಕಾಯಕಯೋಗಿ ಎನಿಸಿದ್ದಾರೆ. ಬಹುಮುಖ ಪ್ರತಿಭೆಯುಳ್ಳ ಶ್ರೀಗಳು ಅನೇಕ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದು ಹತ್ತು ಹಲವು ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನೆಡೆಸಿಕೊಂಡು ಬಂದಿದ್ದಾರೆ.
ಅನೇಕ ಮಹತ್ತರವಾದಂತಹ ಅನುಪಮ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಮನ್ನಣೆಗೆ ಪಾತ್ರರಾದವರು.
ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶ್ರೀಮಠವನ್ನು ಪ್ರಗತಿಪಥದತ್ತ ಒಯ್ಯುತಿದ್ದಾರೆ.
ಸಮಯ, ಜ್ಞಾನಗಳಿಂದ ಕಂಗೊಳಿಸುತ್ತಿರುವ, ದಿನನಿತ್ಯವೂ ಸುದ್ದಿಯಲ್ಲಿರುವ, ಚರ್ಚೆಯಲ್ಲಿರುವ ಮಹಾಮಹಿಮಾಪುರುಷರು. ಈ ಸುದಿನದ ಸಂದರ್ಭದಲ್ಲಿ ಭಕ್ತಿಯಿಂದ ಈ ಎರಡು ನುಡಿ ಮಾತು ಪೂಜ್ಯರ ಪಾದಕ್ಕ ಅರ್ಪಣೆ.

 

ಲೇಖನ-
ಮಹಾದೇವ ಬಿರಾದಾರ
ಚಮಕೇರಿ
ತಾ. ಅಥಣಿ ಜಿ. ಬೆಳಗಾವಿ
ಮೊ.9880635268

LEAVE A REPLY

Please enter your comment!
Please enter your name here