ವರ್ಷದ ಹಾದಿಯಲ್ಲಿ ಹರ್ಷದ ಹೊನಲು |

0

ಚಿಕ್ಕೋಡಿ
“ವರ್ಷದ ಹಾದಿಯಲ್ಲಿ ಹರ್ಷದ ಹೊನಲು!

“ಅಭಿವೃದ್ಧಿಯೇ ಮೂಲ ಮಂತ್ರ” ಎಂಬ ಧ್ಯೇಯದೊಂದಿಗೆ ಆಡಳಿತ ಪ್ರಾರಂಭಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ಅನಾವೃಷ್ಟಿ, ಉತ್ತರ ಕರ್ನಾಟಕದ ಮಹಾ ಪ್ರವಾಹ ಹಾಗೂ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ, ಜನಪರ ಆಡಳಿತವನ್ನು ನೀಡುತ್ತಾ ಇಂದಿಗೆ ಯಶಸ್ವಿ ಒಂದು ವರ್ಷ ಪೂರೈಸಿದೆ.

ಇಂದು ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ, ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ಈ ಒಂದು ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳು ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದ ಮೂಲೆ ಮೂಲೆಗೂ ಮೂಲಭೂತ ಸೌಕರ್ಯ ಕಲ್ಪಿಸಿ, ಅಭಿವೃದ್ಧಿಗೊಳಿಸುವ ಪಣ ತೊಟ್ಟಿರುವ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಕೊರೋನಾದಂತಹ ಸಂಕಟಮಯ ದುಸ್ಥಿತಿಯಲ್ಲಿ ನಮ್ಮ ಗುರಿ ಕೊರೋನಾ ನಿಯಂತ್ರಣ ಹಾಗೂ ನಿರ್ವಹಣೆಯಾಗಿದ್ದರೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.ನಾಡಿನ ಸಮಗ್ರ ಅಭಿವೃದ್ಧಿಗೆ ಏನೆಲ್ಲ ಸಾಧ್ಯವೋ ಅವೆಲ್ಲವನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸಲಾಗುತ್ತಿದ್ದು, ಸರ್ಕಾರದ ಅಭಿವೃದ್ಧಿ ಮಂತ್ರದ ಪಠಣೆ ನಿರಂತರವಾಗಿದೆಂದು ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೇಶ್ ನೇರ್ಲಿ ಜಿ, ಚಿಕ್ಕೋಡಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾದ ಶ್ರೀಮತಿ ಶುಭಾಂಗಿ ಅಶ್ವತಪುರ, ಸ್ಥಳೀಯ ಪ್ರಮುಖರು ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.

चिक्कोडी
“वर्षभराच्या काळात स्पूर्तिदाई कार्य”

“विकास हा मूलभूत मंत्र आहे” या उद्दीष्टाने प्रशासनाची सुरुवात करणारे मुख्यमंत्री श्री बी.एस. येडियुरप्पा जी, यांच्या नेतृत्वाखालील भाजपा सरकार अतिवृष्टी, उत्तर कर्नाटकातील मोठ्या महापूर व अनेक आव्हानांचा सामना करून, लोकपर शासन देत यशस्वी एक वर्ष पूर्ण केला आहे.

आज चिक्कोडी भाजप कार्यालयात माननीय मुख्यमंत्री श्री. बी. एस.येडियुरप्पा जी, यांच्या नेतृत्वाखालील भाजपा सरकार, या एक वर्षात राबविलेल्या विकासकामांची व कामगिरीबाबत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी पत्रकार परिषद उद्देशून संबोधित केले.

राज्याच्या कानाकोपऱ्यात पायाभूत सुविधा विकसित करण्याच्या उद्देशाने भाजपा सरकारने अनेक प्रकल्प राबविले आहेत. आता कोरोनासारख्या संकटाचा परिस्थितीत आमचे ध्येय कोरोना नियंत्रण आणि व्यवस्थापन व इतर विकास कामांची दखल घेतली जात आहे. राज्याचा सर्वांगीण विकासासाठी जे काही शक्य आहे ते अत्यंत कार्यक्षमतेने राखले गेले असून, सरकारच्या विकास मंत्राचा जप सतत चालू आहे असे सांगितले.

यावेळी चिक्कोडी जिल्हा भाजपा अध्यक्ष श्री राजेश नेर्ली, चिक्कोडी जिल्ह्या भाजपा महिला मोर्चाच्या अध्यक्षा श्रीमती शुभांगी अश्वतपुर, स्थानिक मान्यवर, माध्यम प्रतिनिधी व इतर उपस्थित होते.

LEAVE A REPLY

Please enter your comment!
Please enter your name here