ವಾಲ್ಮೀಕಿ ಭಾವಚಿತ್ರಕ್ಕೆ ಅಪಮಾನ ಸೇ.26ರಂದು ನಾಯಕ ಸಂಘದವರಿಂದ ಪ್ರತಿಭಟನೆ

0

ವಾಲ್ಮೀಕಿ ಭಾವಚಿತ್ರಕ್ಕೆ ಅಪಮಾನ ಸೇ.26ರಂದು ನಾಯಕ ಸಂಘದವರಿಂದ ಪ್ರತಿಭಟನೆ

ಗೌರಿಬಿದನೂರು: ಭಗವಾನ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳಿಗೆ ಅಟ್ರಾಸಿಟಿ ಕೇಸ್ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಅಗ್ರಹಿಸಿ ತಾಲ್ಲೂಕು ನಾಯಕ ಸಂಘದಿಂದ ದಿನಾಂಕ 21 ನೇ ಸೋಮವಾರ ಪ್ರತಿಭಟನೆ ಮಾಡಲಾಗುವುದು ಎಂದು ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಬಾಬಣ್ಣ ತಿಳಿಸಿದರು

ತಾಲ್ಲೂಕಿನ ಹೃದಯ ಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಸೋಮವಾರ ಬೆಳಗ್ಗೆ 11:00 ಗಂಟೆಗೆ ನಾಯಕ ಸಮುದಾಯದವರು ಎಲ್ಲಾ ಸೇರಿ ಮಹರ್ಷಿ ವಾಲ್ಮೀಕಿ ರವರಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಲಾಗುವುದು ,ಅದುದರಿಂದ ಈ ಪ್ರತಿಭಟನೆಗೆ ನಾಯಕ ಸಂಘದ ಪದಾಧಿಕಾರಿಗಳು, ಮುಖಂಡರುಗಳು, ಹಿರಿಯರು ,ಯುವ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು
ನಾಯಕ ಮುಖಂಡ ಜೆ .ಲೋಕೇಶ್ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರಿಗೆ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವಮಾನಿಸಿ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಆಗ್ರಹಿಸಿದರು

ಮದವನಹಳ್ಳಿ ಗಿರೀಶ್ ರವರು ಮಾತನಾಡಿ ಮಹರ್ಷಿ‌ ವಾಲ್ಮೀಕಿಯವರ ಕುರಿತು ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅಶ್ಲೀಲವಾಗಿ ಚಿತ್ರಿಸಿ ಅಪಮಾನ ಮಾಡಿದ್ದಾರೆ ಸರ್ಕಾರ ಕೂಡಲೇ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು

ಎಂ ಹೆಚ್ ರಾಘವ್ ಮಾತನಾಡಿ ವಾಲ್ಮೀಕಿ ಮಹರ್ಷಿಗಳ ಕೊಡುಗೆಯನ್ನು ಪರಿಗಣಿಸದೆ ಆಪಚಾರ ಮಾಡಿರುವ ದ್ರೋಹಿಗಳನ್ನು ಕೊಡಲೇ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಟ ನಡೆಸಲಾಗುವುದು ಎಂದು ಎಚ್ಚರಿಹಳಸಿದರು

ಇದೇ ಸಮಾಯದಲ್ಲಿ ಬೈಚಾಪುರ ಗಂಗಾಧರಪ್ಪ ,ನಿವೃತ್ತ ಶಿಕ್ಷಕರಾದ ಸಿದ್ದರಾಮಯ್ಯ, ಪ್ರಶಾಂತ್ ,ಎಟಿಎಂ ನಾಗ,ಮದವನಹಳ್ಳಿ ಮದನ್ ಸೋಮು, ಮುಂತಾದವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here