ವಿಜಯಪುರ ಅಭಿವೃದ್ಧಿಯ ಪಥದಲ್ಲಿ ಒಂದು ವರ್ಷ ಪೂರೈಸಿದ ಸಂದರ್ಭ ಮಾನ್ಯ ಮುಖ್ಯ ಮಂತ್ರಿಗಳ ಹಿತಸಂದೇಶ | विजयपुर “विकासाच्या पथात एक वर्ष पूर्ण केल्याबद्दल माननीय मुख्यमंत्र्यांचे शुभसंदेश”

0

ವಿಜಯಪುರ
“ಅಭಿವೃದ್ಧಿಯ ಪಥದಲ್ಲಿ ಒಂದು ವರ್ಷ ಪೂರೈಸಿದ ಸಂದರ್ಭ ಮಾನ್ಯ ಮುಖ್ಯ ಮಂತ್ರಿಗಳ ಹಿತಸಂದೇಶ”

ಜನಸೇವೆಯನ್ನೇ ಉಸಿರಾಗಿಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿದು, ರಾಜ್ಯದ ಸರ್ವತೋಮುಖ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಜಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಆಡಳಿತವನ್ನು ದಕ್ಷತೆಯಿಂದ ಪೂರೈಸಿದೆ.

ಈ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲಾ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನುದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಮಾತನಾಡಿದರು ಹಾಗೂ ರಾಜ್ಯ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿರುವ ಕುರಿತು ವರದಿ ವಾಚಿಸಿದರು. ಈ ಅದ್ಭುತ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿಜಯಪುರದ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ವೀಕ್ಷಿಸಿದರು.

ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರವು ಒಂದು ವರ್ಷದಲ್ಲಿ ಕೈಗೊಂಡ ಜನಪರ ಕೈಂಕರ್ಯಗಳು, ಸಾಧನೆಗಳ ಕುರಿತು ವಿವರಿಸಲಾಗಿರುವ “ಪರಿಹಾರದ ಸ್ಪರ್ಶ” ಎಂಬ ವಿಶೇಷ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸೋಮನಗೌಡ ಬಿ ಪಾಟೀಲ, ಶ್ರೀ ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಅನುಪಮ ಅಗರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಗೋವಿಂದ ರೆಡ್ಡಿ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

विजयपुर
“विकासाच्या पथात एक वर्ष पूर्ण केल्याबद्दल माननीय मुख्यमंत्र्यांचे शुभसंदेश”

जनसेवा हीच ईश्वर सेवा मानून राज्याच्या सर्वांगीण प्रगतीसाठी रात्रंदिवस कार्यरत असलेले माननीय मुख्यमंत्री श्री बी. एस. येडियुरप्पा जी, यांच्या नेतृत्वाखालील भाजपा सरकारने एक वर्ष यशस्वीरित्या पार पाडले आहे.

या पार्श्वभूमीवर, माननीय मुख्यमंत्र्यांनी व्हिडिओ संभाषणातून राज्यातील सर्व मंत्री, आमदार आणि अधिकाऱ्यांना संबोधित केले आणि राज्य सरकारला एक वर्ष पूर्ण झाल्याचे अहवाल सादर केले. विजयपुर जिल्हाधिकारी कार्यालयाच्या सभागृहात हा कार्यक्रम विजयपुर जिल्हा पालकमंत्री व राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी पाहणी केली.

जिल्हास्तरावर आयोजित कार्यक्रमात जनतेसाठी भाजपा सरकारने वर्षभरात राबविलेल्या कामगिरीबाबत स्पष्टीकरण देणाऱ्या “परीहारद स्पर्श” या नावाचे विशेष पुस्तक अनावरण केले.

यावेळी आमदार सोमनगौड बी पाटील, श्री देवानंद चव्हाण, जिल्हाधिकारी श्री वाय.एस. पाटील, जिल्हा पोलिस प्रमुख श्री अनुपम अग्रवाल, जिल्हा पंचायतीचे मुख्य कार्यकारी श्री गोविंदा रेड्डी, विविध विभागांचे वरिष्ठ अधिकारी व माध्यम प्रतिनिधी उपस्थित होते.

LEAVE A REPLY

Please enter your comment!
Please enter your name here