ವಿದ್ಯಾಗಮ ಅನುಷ್ಠಾನ ಪರಿಶೀಲನೆಗೆ ಮಾಗಡಿ ತಾಲೂಕಿಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್

0

ಮಾಗಡಿ ತಾಲೂಕಿನ ಹಲವೆಡೆ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಗಡಿ ತಾಲ್ಲೂಕಿನ ಕಲ್ಲೂರು, ವರದೇನಹಳ್ಳಿ, ಬಾಚೇನಹಳ್ಳಿ, ತಗಚುಗುಪ್ಪೆ, ಬಂಟರಕುಪ್ಪೆ ಕಾಲೋನಿ, ಬಂಟರಕುಪ್ಪೆ, ಬೆಳಗುಂಬ ಮತ್ತು ಮಾಗಡಿ ಈ ಸ್ಥಳಗಳ ಆಯ್ದೆಡೆ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಸಚಿವರು ಮಕ್ಕಳ ಕಲಿಕೆಯನ್ನು ಪರಾಮರ್ಶಿಸಿದರು.

“ಮಕ್ಕಳೊಂದಿಗೆ ಕಲೆತು ಮಾತನಾಡಿದೆ. ಅವರೇನು ಕಲಿಯುತ್ತಿದ್ದಾರೆಂದು ವಿಚಾರಿಸಿದೆ. ಕೆಲ ಪ್ರಶ್ನೆಗಳನ್ನು ಸಹ ಕೇಳಿದೆ. ಕೋವಿಡ್-19 ಕುರಿತು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅವರಲ್ಲಿನ ಮಾಹಿತಿ ಪರೀಕ್ಷಿಸಿದೆ. ಎಲ್ಲಾ ಮಕ್ಕಳು ಮಾಸ್ಕ್ ಧರಿಸಿದ್ದು, ಶಾರೀರಿಕ ಅಂತರ ಕಾಪಾಡಿಕೊಂಡಿದ್ದು ಗಮನಾರ್ಹ. ಮಕ್ಕಳೆಲ್ಲಾ ಖುಷಿಯಾಗಿ ಇದ್ದದ್ದನ್ನು ಕಂಡು ಸಂತಸವಾಯಿತು.” ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here