ಬೈಕ್ ಡಿಕ್ಕಿ:ಸವಾರ ಸಾವು
ಕೊಡಗು(ಸೋಮವಾರಪೇಟೆ): ವಿದ್ಯುತ್ ಕಂಬಕ್ಕೆ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ
ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಬಳಿ ನಡೆದಿದೆ.
ಮಡಿಕೇರಿ ದಾಸವಾಳ ರಸ್ತೆ ನಿವಾಸಿ ಗೌತಮ್ (18) ಮೃತ ದುರ್ದೈವಿಯಾಗಿದ್ದು ಗೌತಮ್ ತನ್ನ ಸ್ನೇಹಿತರೊಂದಿಗೆ
2 ಬೈಕಿನಲ್ಲಿ ಮಾದಾಪುರ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯೆ ಗೌತಮ್ ಚಲಾಯಿಸುತ್ತಿದ್ದ ಬೈಕ್
ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಹಿಂಬದಿ ಸವಾರರಿಗೂ ಗಾಯಗಳಾಗಿತ್ತು ತಕ್ಷಣವೇ
ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರು ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ಕರೆತರುವ ಮಾರ್ಗ ಮದ್ಯೆ
ಗೌತಮ್ ಸಾವನಪ್ಪಿದ್ದು ಮತ್ತೊಬ್ಬ ಸವಾರ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.