ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಿಸಲು ‘ವಿಮಾನಯಾನ ಇಲಾಖೆ’ ಚಿಂತನೆ

0

ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಿಸಲು ವಿಮಾನಯಾನ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

. ಸದ್ಯ ಶೇ. 50ರಷ್ಟು ವಿಮಾನ ಹಾರಾಟವನ್ನು ಮುಂದಿನ ಎರಡು ತಿಂಗಳಲ್ಲಿ ಶೇ. 80ರಷ್ಟಕ್ಕೆ ಹೆಚ್ಚಿಸಲು ವಿಮಾನಯಾನ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ವಿಮಾನಯಾನ ಇಲಾಖೆಯು ಶೀಘ್ರವೇ ವಿಮಾನಯಾನ ಸಂಸ್ಥೆಗಳ ಸಭೆಯನ್ನು ನಡೆಸಲಿದೆ. ಸಭೆಯಲ್ಲಿ ವಿಮಾನ ಹಾರಾಟ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರತಿದಿನ ದೇಶದಲ್ಲಿ ಸರಿ ಸುಮಾರು 2 ಲಕ್ಷ ಜನ ವಿಮಾನಯಾನ ಮಾಡಲಿದ್ದು ಅವರ ಅನುಕೂಲಕ್ಕೆ ತಕ್ಕಂತೆ ವಿಮಾನ ಪ್ರಯಾಣ ಆರಂಭಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ತೀವ್ರ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳು ಈಗ ವಿಮಾನ ಹಾರಾಟದ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿವೆ.

LEAVE A REPLY

Please enter your comment!
Please enter your name here