ವಿಮಾನದಲ್ಲಿ ಛಾಯಾಗ್ರಹಣ ಮಾಡಿದ್ದು ಕಂಡುಬಂದರೆ ಆ ವಿಮಾನ ಹಾರಾಟ 2 ವಾರ ಸ್ಥಗಿತ: ಡಿಜಿಸಿಎ

0

ಯಾರಾದರೂ ಛಾಯಾಗ್ರಹಣ ಮಾಡುತ್ತಿರುವುದು ಕಂಡುಬಂದರೆ ಎರಡು ವಾರಗಳ ಅವಧಿಗೆ ನಿಗದಿತ ವಿಮಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ಇಂಡಿಗೋಗೆ “ಸೂಕ್ತ ಕ್ರಮ” ತೆಗೆದುಕೊಳ್ಳುವಂತೆ ಕೇಳಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಚಂಡೀಗಢ-ಮುಂಬೈ ವಿಮಾನದಲ್ಲಿ ನಟಿ ಕಂಗನಾ ರಣಾವತ್ ಪ್ರಯಾಣಿಸುತ್ತಿದ್ದು ಈ ವಿಮಾನದಲ್ಲಿ ಮಾಧ್ಯಮ ಸಿಬ್ಬಂದಿಯಿಂದ ಸುರಕ್ಷತೆ ಮತ್ತು ಸಾಮಾಜಿಕ ಅಂತರ ಮಾರ್ಗಸೂಚಿ ಉಲ್ಲಂಘನೆ ಆಗಿರುವುದು ಕಂಡುಬಂದಿತ್ತು.

ವಿಡಿಯೋದಲ್ಲಿ, ವಿಮಾನದ ಮುಂದಿನ ಸಾಲುಗಳಲ್ಲಿ ಕುಳಿತಿದ್ದ ಕಂಗನಾ ರಣಾವತ್ ನಿಂದ ಪ್ರತಿಕ್ರಿಯೆಯನ್ನು ಪಡೆಯಲು ವರದಿಗಾರರು ಮತ್ತು ಕ್ಯಾಮೆರಾಮೆನ್‌ಗಳು ಕೀಟಲೆ ಮಾಡಿದ್ದರು.

ಇಂದಿನಿಂದ, ಯಾವುದೇ ನಿಗದಿತ ಪ್ರಯಾಣಿಕ ವಿಮಾನಗಳಲ್ಲಿ ಯಾವುದೇ ಉಲ್ಲಂಘನೆ(ಛಾಯಾಗ್ರಹಣ) ಕಂಡುಬಂದರೆ, ಆ ನಿರ್ದಿಷ್ಟ ಮಾರ್ಗದ ಹಾರಾಟದ ವೇಳಾಪಟ್ಟಿಯನ್ನು ಮುಂದಿನ ವಾರದಿಂದ ಎರಡು ವಾರಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ಡಿಜಿಸಿಎ ಆದೇಶಿಸಿದೆ.

LEAVE A REPLY

Please enter your comment!
Please enter your name here