ವಿಶಿಷ್ಟ ಸಾಧಕರು, ಸೇವಾನಿರತರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲು ಇಲ್ಲಿದೆ ಮಾಹಿತಿ

0

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿರುವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ನಾಮನಿರ್ದೇಶನ /ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.

2021 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಘೋಷಿಸಬೇಕಾದ ಪದ್ಮ ಪ್ರಶಸ್ತಿಗಳಿಗಾಗಿ ಆನ್ಲೈನ್ ನಾಮನಿರ್ದೇಶನ ಮತ್ತು ಶಿಫಾರಸು ಮಾಡಲು ಕಳೆದ ಮೇ 1 ರಿಂದ ಪ್ರಕ್ರಿಯೆ ಆರಂಭವಾಗಿದ್ದು ಸೆಪ್ಟೆಂಬರ್ 15 ರವರೆಗೆ ಪದ್ಮಾ ಅವಾರ್ಡ್ ಪೋರ್ಟಲ್ ನಲ್ಲಿ(https://padmaawards.gov.in)ಆನ್ಲೈನ್ ಮೂಲಕ ನಾಮನಿರ್ದೇಶನ ಮಾಡಬಹುದು.

ಈಗಾಗಲೇ 8035 ನೊಂದಣಿ ಮಾಡಲಾಗಿದ್ದು 6361 ವಿರುದ್ಧ ಶಿಫಾರಸುಗಳು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸಾರ್ವಜನಿಕ ವ್ಯವಹಾರ, ನಾಗರಿಕ, ಸಾಮಾಜಿಕ ಕಾರ್ಯ ಮೊದಲಾದ ಎಲ್ಲಾ ಕ್ಷೇತ್ರಗಳು, ವಿಭಾಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆ ಮತ್ತು ಸೇವೆಗಾಗಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುವುದು.

ಸೇವೆ. ವ್ಯಾಪಾರ. ಕೈಗಾರಿಕೆ. ಜನಾಂಗ ಉದ್ಯೋಗ ಸ್ಥಾನ ಅಥವಾ ಲಿಂಗಬೇಧವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಪಿಎಸ್.ಯು.ಗಳೊಂದಿಗೆ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗೆ ಅರ್ಹರಲ್ಲ.

ಪದ್ಮ ಪ್ರಶಸ್ತಿಗಳನ್ನು ಪೀಪಲ್ಸ್ ಪದ್ಮ ಆಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದ್ದು ಎಲ್ಲ ಸ್ವಯಂ ನಾಮನಿರ್ದೇಶನ ಸೇರಿದಂತೆ ಪ್ರಶಸ್ತಿಗೆ ನಾಮನಿರ್ದೇಶನ ಅಥವಾ ಶಿಫಾರಸು ಮಾಡಲು ವಿನಂತಿಸಲಾಗಿದೆ.

ಈ ಕುರಿತು ಹೆಚ್ಚಿನ ವಿವರಗಳು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ (www.mha.gov.in) ಪ್ರಶಸ್ತಿಗಳು ಮತ್ತು ಪದಕಗಳು ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳು ವೆಬ್‌ಸೈಟ್‌ನಲ್ಲಿ https://padmaawards.gov.in/AboutAwards.aspx ಲಿಂಕ್‌ನೊಂದಿಗೆ ಲಭ್ಯವಿದೆ.

LEAVE A REPLY

Please enter your comment!
Please enter your name here