ವಿಶೇಷ ಡೂಡಲ್ ಬಿಡಿಸುವ ಮೂಲಕ ‘ಕೊರೋನಾ ವಾರಿಯರ್ಸ್’ಗೆ ಧನ್ಯವಾದ ಹೇಳಿದ ಗೂಗಲ್

0

ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಮಹಾಮಾರಿ ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್’ಗೆ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಧನ್ಯವಾದ ಹೇಳಿದೆ.

ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ನರ್ಸ್’ಗಳು, ಡೆಲಿವರಿ ಸಿಬ್ಬಂದಿಗಳು, ರೈತರು, ಶಿಕ್ಷಕರು, ಸಂಶೋಧಕರು, ಪೌರ ಕಾರ್ಮಿಕರು, ತುರ್ತು ಸೇವೆ ಸಿಬ್ಬಂದಿಗಳು ಹಾಗೂ ಇತರೆ ಕೊರೋನಾ ವಾರಿಯರ್ಸ್’ಗೆ ಗೂಗಲ್ ಕೃತಜ್ಞತೆ ಸಲ್ಲಿಸಿದೆ.

ಕೊರೋನಾ ವಾರಿಯರ್ಸ್’ಗೆ ಧನ್ಯವಾದಗಳನ್ನು ಸಲ್ಲಿಸಲಾಗಿರುವ ವಿಶೇಷ ಡೂಡಲ್ ನ್ನು ಗೂಗಲ್ ಇಂಡಿಯಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಕೊರೋನಾ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಗೌರವಾರ್ಥವಾಗಿ ಎಲ್ಲರೂ ಸಹ ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿಕೊಂಡಿದೆ.

ಗೂಗಲ್ ಈ ವರೆಗೆ ತನ್ನ ಡೂಡಲ್ ಮೂಲಕ ಹಲವಾರು ಪ್ರಖ್ಯಾತ ವ್ಯಕ್ತಿಗಳಿಗೆ ಸಂಬಂಧಿಸಿದ ವಿಶೇಷ ದಿನಗಳು, ಹಬ್ಬಗಳು ಹಾಗೂ ದೇಶದ ಇತಿಹಾಸದಲ್ಲಿನ ಮಹತ್ವದ ದಿನಗಳನ್ನು ಸ್ಮರಿಸಿದೆ. ಮಹತ್ವದ ಸಂದರ್ಭಗಳನ್ನು ಗುರುತಿಸಲು ಗೂಗಲ್ ತನ್ನ ಲೋಗೋದಲ್ಲಿ ಬದಲಾವಣೆಗಳನ್ನು ಮಾಡುತ್ತದೆ.

ಪ್ರಸ್ತುತ ಮಹಾಮಾರಿ ಕೊರೋನಾ ವಿಶ್ವಕ್ಕೆ ಕಾಲಿಟ್ಟಿದ್ದು, ಇದರ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ನಿರಂತರವಾಗಿ ಗೌರವ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಬಂದಿದೆ.

ಗೂಗಲ್ ಬಿಡಿಸಿರುವ ವಿಶೇಷ ಡೂಡಲ್ನ ವಿಶೇಷವೆಂದರೆ, ಜಿ ಅಕ್ಷರದ ನಂತರ 2 ಓಗಳು ಕೊರೋನಾ ವಾರಿಯರ್ಸ್’ಗಳ ಸೇವೆಯನ್ನು ಸೂಚಿಸಿದೆ. ಇದೇ ವೇಳೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ತಿಳಿಸಿದೆ.

(ಏಜೆನ್ಸೀಸ್​)

LEAVE A REPLY

Please enter your comment!
Please enter your name here