ವಿಶ್ವ ತೆಂಗು ದಿನ: ತೆಂಗಿನ ಎಣ್ಣೆಯಲ್ಲಿದೆ ಜಾದು ಶಕ್ತಿ

0

ಇಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ. ತೆಂಗಿನ ಕೃಷಿ ಮತ್ತು ಉತ್ಪಾದಕತೆಯನ್ನು ಉತ್ತೇಜಿಸಲು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ.

ತೆಂಗಿನಕಾಯಿ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳ್ಳೆಯದು. ತೆಂಗಿನ ಎಣ್ಣೆಯಿಂದ ಸಾಕಷ್ಟು ಪ್ರಯೋಜನವಿದೆ.

ತೆಂಗಿನ ಎಣ್ಣೆ ಚರ್ಮವನ್ನು ಪೋಷಿಸುತ್ತದೆ. ಚರ್ಮವನ್ನು ಹೈಡ್ರೀಕರಿಸುತ್ತದೆ. ತೆಂಗಿನ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಮೈ, ಕೈಗಳಿಗೆ ಹಚ್ಚುವುದ್ರಿಂದ ಸಾಕಷ್ಟು ಪ್ರಯೋಜನವಿದೆ.

ತೆಂಗಿನ ಎಣ್ಣೆ ಗಾಯವನ್ನು ಗುಣಪಡಿಸುವ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ಆಂಟಿಬಯೋಟಿಕ್ ಜೊತೆ ಸೇರಿಸುವುದ್ರಿಂದ ಸುಟ್ಟ ಗಾಯಗಳು ಸಹ ಗುಣವಾಗುತ್ತವೆ.

ಮೊಡವೆಗಳನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆ ಸಹಕಾರಿ. ಮೊಡವೆ ಸಮಸ್ಯೆ ಇದ್ದರೆ, ರಾತ್ರಿ ಮುಖಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿ ನಂತರ ನಿದ್ರೆ ಮಾಡಿ. ಬೆಳಿಗ್ಗೆ ಎದ್ದು ಮುಖವನ್ನು ಸ್ವಚ್ಛಗೊಳಿಸಿ.

ತೆಂಗಿನ ಎಣ್ಣೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಊರಿಯೂತದ ಜಾಗಕ್ಕೆ ಎಣ್ಣೆ ಹಚ್ಚಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here