ವಿಶ್ವ ಪರಿಸರ ಸಂರಕ್ಷಣೆ ದಿನಾಚರಣೆಯ ಅಂಗವಾಗಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು

0

ವಿಶ್ವ ಪರಿಸರ ಸಂರಕ್ಷಣೆ ದಿನಾಚರಣೆಯ ಅಂಗವಾಗಿ

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು

ವಿಠ್ಠಲ್ ನಗರ :ಜು26 : ನಗರದ ದೇವರ ಕೆರೆ ಉದ್ಯಾನವನದಲ್ಲಿ ಪರಿಸರ ಸಂರಕ್ಷಣಾ ದಿನಾಚರಣೆಯನ್ನು ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಮಂಗಳವಾರ (ಇಂದು ) ಆಚರಿಸಿದರು. *ಕೊರೊನಾ ಸೋಂಕಿನ ಭೀತಿ ಇರುವುದರಿಂದಾಗಿ *ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆದವು.

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಸಂಸ್ಥಾಪಕಕಾಧ್ಯಕ್ಷ ರಾದ ಶ್ರೀಮತಿ ಸುಜಾತ ಎಂ. ರವರು ಪಾರ್ಕಿನ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುದರ ಮೂಲಕ ಚಾಲನೆ ನೀಡಿ ದ ಅವರು ಮಾತನಾಡಿ ‘ಜಗತ್ತಿನಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜೀವವೈವಿಧ್ಯವು ಪರಸ್ಪರ ಅವಲಂಬಿತವಾಗಿದೆ. ಭೂಮಿಯ ರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳಬೇಕುಸಸಿಗಳನ್ನು ಬೆಳೆಸಿ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು’ .ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ವಚ್ಛ ಮತ್ತು ಸಮೃದ್ಧ ಪರಿಸರವನ್ನು ಕಾಣುತ್ತಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಪರಿಸರ ಸಂಕರಕ್ಷಿಸುವುದು ಅವಶ್ಯವಾಗಿದೆ’ ಎಂದರು*.

ಟ್ರಸ್ಟಿನ ಕಾರ್ಯದರ್ಶಿ ರವಿಕುಮಾರ್ ಸಿ. ಡಿ ಮಾತನಾಡಿ,ಪರಿಸರ ಉಳಿದರೆ ,ಮನುಷ್ಶ ಉಳಿಯುತ್ತಾನೆ .ಪರಿಸರ ನಾಶವಾದರೆ ಇಡಿ ಮನುಕುಲವೇ ನಾಶವಾಗುತ್ತದೆ .ಪರಿಸರ ರಕ್ಷಣೆ ಮಾಡಿದರೆ ಮಾನಸಿಕ ಮತ್ತು ಉತ್ತಮ ಆರೋಗ್ಯವಂತರಾಗಿ ಇರಬಹುದು .ಇಂದು ಬೆಂಗಳೂರು ಕಾಂಕ್ರೀಟ್ ನಾಡು ಎಂದು ಕುಖ್ಯಾತಿಗೆ ಪಾತ್ರವಾಗಿದೆ .1990ರ ದಶಕದಲ್ಲಿ ಬೆಂಗಳೂರಿಗೆ ಗಾರ್ಡನ್ ಸಿಟಿ ,,ಗ್ರೀನ್ ಸಿಟಿ ಎಂದು ಹೆಸರು ಗಳಿಸಿತ್ತು .ನಂತರ ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳ ನಾಶವಾಗಿ ಬೆಂಗಳೂರು ಪರಿಸರ ಮಾಲಿನ್ಯನಗರ ವಾಯಿತು .ಬೆಂಗಳೂರು ನಾಗರಿಕರು ಪರಿಸರ ಉಳಿಸಲು ಸಂಘಟಿತರಾಗಿ ನಿತ್ಯ ಪರಿಸರ ಅಂದೋಲನ ವಾಗಬೇಕು .ಮತ್ತೆ ಬೆಂಗಳೂರು ಸುಂದರ ಪರಿಸರಯುಳ್ಳ ನಗರವಾಗಬೇಕು ಎಂದು ಹೇಳಿದರುಕಾರ್ಯಕ್ರಮದಲ್ಲಿ ಹಲವಾರು ಹಣ್ಣುಗಳ ಸಸಿಗಳಾದ ಸೀಬೆ ಹಣ್ಣಿನ ಗಿಡ, ದಾಳಿಂಬೆ ಸಸಿಗಳನ್ನು ನೆಡಲಾಯಿತು* ಸಮಾರಂಭದಲ್ಲಿ ಖಜಾoಚಿ ಜಿ. ವಿಜಯ್, ಟ್ರಸ್ಟಿಗಳಾದ ಹಾರಿಕ. ಡಿ. ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here