ವಿಸ್ಮಯ ಸೇವಾ ಟ್ರಸ್ಟ್‌ ವತಿಯಿಂದ ಇಂದು 74 ನೆಯ ಸ್ವಾತಂತ್ರ್ಯ ದಿನಾಚರಣೆ

0

ವಿಸ್ಮಯ ಸೇವಾ ಟ್ರಸ್ಟ್‌ ವತಿಯಿಂದ ಇಂದು 74 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು #ಪೌರ #ಕಾರ್ಮಿಕರು ಹಾಗು #ಹಿರಿಯ #ಶಿಕ್ಷಕರಿಂದ ಧ್ವಜಾರೋಹಣ ಮಾಡಿಸಿ ತಾಯಿ #ಭಾರತಾಂಬೆಗೆ #ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು…
ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 222 ನೇ ಜಯಂತ್ಯೋತ್ಸವದ ಮತ್ತು ೭೪ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..!!

ಬ್ರಿಟಿಷರ ಸರ್ವಾಧಿಕಾರಿ ಆಡಳಿತದಿಂದ #ಸ್ವಾತಂತ್ರ್ಯ ಪಡೆಯಲು ಬರೋಬ್ಬರಿ 150 ವರ್ಷಗಳೇ ಬೇಕಾಯಿತು…. ಲಕ್ಷಾಂತರ ಕೋಟ್ಯಂತರ ಜನಸಂಖ್ಯೆ ಇದ್ದರೂ ಕೂಡ ಬ್ರಿಟಿಷರ ಅಧೀನದಲ್ಲಿ ಇರುವಂತಹ ಸನ್ನಿವೇಶ ಎದುರಾಯಿತು… ಇದಕ್ಕೆ ಬಹಳ ಮುಖ್ಯ ಕಾರಣ ನಮ್ಮಲ್ಲಿನ #ಒಗ್ಗಟ್ಟಿನ #ಕೊರತೆ #ಐಕ್ಯತೆಯ #ಕೊರತೆ….
ಅದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಐಕ್ಯತೆಯ ಸಂಕೇತ ಮತ್ತು ಸಮಾನತೆಯಿಂದ ಬಾಳೋಣ… ಸಾಮಾಜಕ್ಕೆ ನಾವೆಲ್ಲರೂ ಭಾರತೀಯರು..ಎಂಬ ಸಂದೇಶವನ್ನು ಶಾಶ್ವತವಾಗಿ ಸಾರೋಣ…
ನಮ್ಮ ವೀರ ಯೋಧರಿಗೆ.. ಅನ್ನ ನೀಡುವ ರೈತರಿಗೆ..ಹಾಗೂ ಈ ಕೊರೋನಾ ಸೋಂಕಿತರಿಗೆ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು ದಾದಿಯರು..ಪೌರ ಕಾರ್ಮಿಕರು ಕೊರೋನಾ ವಾರಿಯರ್ಸ್ ಎಲ್ಲರಿಗೂ ತಲೆಬಾಗಿ ನಮಿಸೋಣ..

ಈ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಿದ ಎಲ್ಲ ಗೌರವಾನ್ವಿತ ಅತಿಥಿಗಳಿಗೆ ಮತ್ತು ನನ್ನೆಲ್ಲಾ ಸಹೋದರ ಸಹೋದರಿಯರಿಗೆ ವಿಸ್ಮಯ ಸೇವಾ ಟ್ರಸ್ಟ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು..

#ವಂದೇ #ಮಾತರಂ💐💐💐🙏🙏😊😊😊

LEAVE A REPLY

Please enter your comment!
Please enter your name here