ವೃದ್ದೆಯನ್ನೂ ಸಹ ಬಿಡದ ಕಾಮುಕರು…! 75 ವರ್ಷದ ವೃದ್ಧೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ..?

0

ನೆನಪಿನಶಕ್ತಿ ಕಳೆದುಕೊಂಡು ಮೂಲೆ ಹಿಡಿದಿರುವ 75 ವರ್ಷದ ವೃದ್ಧೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಕೇರಳದ ಕೋಲೆಂಚೆರಿ ಸಮೀಪದ ಪ್ಯಾಂಗೋಡ್​ ಎಂಬ ಗ್ರಾಮದಲ್ಲಿ ಪರಿಚಿತರ ಮನೆಗೆ ಬಂದಿದ್ದಾಗ ವೃದ್ಧೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಖಾಸಗಿ ವೈದ್ಯಕೀಯ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿದೆ. ಆಕೆಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ಕೂಡ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

ಎರಡು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಹೊಂದಿರುವ ಈ ವೃದ್ಧೆ ಭಾನುವಾರ ತನ್ನ ಗ್ರಾಮದಲ್ಲಿರುವ ಪರಿಚಿತರ ಮನೆಗೆ ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆಗೆ ನೆನಪಿನ ಶಕ್ತಿ ಕ್ಷೀಣಿಸಿದೆ. ತನ್ನ ಮೇಲೆ ಅತ್ಯಾಚಾರ ಎಸಗಿದವನ ಬಗ್ಗೆ ಕ್ಷಣಕ್ಕೊಂದು ಮಾಹಿತಿ ಕೊಡುತ್ತಿದ್ದಾರೆ. ಹಾಗಾಗಿ, ನಿಜವಾದ ಆರೋಪಿಯನ್ನು ಬಂಧಿಸಲು ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here