ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಮರಣ.
ಅಥಣಿ ವರದಿ
ಸಾಚಿ ಟಿವಿ ನ್ಯೂಸ್
ಅಥಣಿ: ಆಸ್ಪತ್ರೆಗೆ ಅಲೆದು ಅಲೆದು ಹೊಟ್ಟೆಯಲ್ಲಿದ್ದ ಮಗುವನ್ನ ಕಳೆದುಕೊಂಡ ತಾಯಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ
ಹೆರಿಗೆ ನೋವಿನಿಂದ ಬಳಲುತ್ತಿದ್ದ ತೆಲಸಂಗ ಗ್ರಾಮದ ಗರ್ಭಿಣಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ ಕೇಳಿಬರುತ್ತಿದೆ. ಹಾಗೂ ಅಥಣಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಮಗು ಕಳೆದುಕೊಂಡ ಕುಟುಂಬದ ಸದಸ್ಯರ ಆರೋಪ ಕೇಳಿ ಬರುತ್ತಿದೆ
ಮೊದಲು ತೆಲಸಂಗ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿದ್ದ ಮಹಿಳೆ ಆರೋಗ್ಯ ಸ್ಥಿತಿ ಗಂಭೀರ ಇದೆ ಅಂತಾ ಅಥಣಿ ತಾಲೂಕು ಆಸ್ಪತ್ರೆ ಕಳುಹಿಸಿದ್ದರು. ಸ್ಥಳೀಯ ವೈದ್ಯರು ಅಥಣಿ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ದಾಖಲಿಸಿಕೊಳ್ಳದೇ ಬರೀ ಔಷಧಿ ಬರೆದು ಕೊಟ್ಟು ಕಳುಹಿಸಿದ್ದಾರೆ. ವೈದ್ಯನ ಮಾತು ಕೇಳಿ ಮತ್ತೆ ತೆಲಸಂಗ ಗ್ರಾಮಕ್ಕೆ ಮರಳಿದ್ದ ಕುಟುಂಬಸ್ಥರು
ಪುನಃ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಆಗಮಿಸುವ ಮಾರ್ಗಮಧ್ಯದಲ್ಲಿ ಆ್ಯಂಬುಲೆನ್ಸ್ನಲ್ಲಿ ಹೆರಿಗೆ ಆಗಿದೆ ಬಳಿಕ ಮಗುವಿನ ಸಾವು ಸಂಭವಿಸಿದೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿರುವ ಕುಟುಂಬಸ್ಥರು
ಬೈಟ್_ ರಾಧಾ ಮಾದರ. ಸಂಬಂಧಿಕರು.
ಸಾಚಿ ಟಿವಿ ನ್ಯೂಸ್ ವರದಿ :ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ