ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೂ ಕೊರೊನಾ ದೃಢ

0

ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಸೆ . 8 ರಂದು ತ್ರೈಮಾಸಿಕ ಕೆಡಿಪಿ ಸಭೆಗೆ ಭಾಗವಹಿಸುವ ಪೂರ್ವದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು . ನಂತರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸದರಿ ಸಭೆಯಲ್ಲಿ ಭಾಗವಹಿಸಿದ್ದರು . ಆ ದಿನ ರಾತ್ರಿ ಬೆಂಗಳೂರಿಗೆ ಹೋದಾಗ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುನಃ ಟೆಸ್ಟ್ ‌ ಮಾಡಿಸಿದಾಗ ಕೊರೊನಾ ದೃಢವಾಗಿದೆ . ವೈದ್ಯರ ಸಲಹೆ ಮೇರೆಗೆ ನಾನು ಬೆಂಗಳೂರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಶೀಘ್ರ ಗುಣಮುಖಗೊಂಡು ಎಂದಿನಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ, ನನ್ನ ಸಂಪರ್ಕದಲ್ಲಿರುವವರು ಸ್ವಯಂ ಕೋವಿಡ್ ಟೆಸ್ಟ್ ಮಾಡಿಸಿ , ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಕ್ವಾರಂಟೈನ್ ಆಗುವಂತೆ ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here