ಶಿಕ್ಷಕರಿಗೆ ಐದು ದಿನಗಳ ವಿಷಯಾಧಾರಿತ ತರಬೇತಿ

0

ಶಿಕ್ಷಕರಿಗೆ ಐದು ದಿನಗಳ ವಿಷಯಾಧಾರಿತ
ತರಬೇತಿ

ಸವದತ್ತಿ : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ
ನಂ-2 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ
ಸಮನ್ವಯಾಧಿಕಾರಿಗಳ ಆಶ್ರಯದಲ್ಲಿ ಶಿಕ್ಷಕರಿಗಾಗಿ ಐದು
ದಿನಗಳ ಕಾಲ ವಿಷಯಾಧಾರಿತ ತರಬೇತಿ ಜರುಗಿತು. ಸದರಿ
ತರಬೇತಿಯಲ್ಲಿ ಸವದತ್ತಿ ಉತ್ತರ, ದಕ್ಷಿಣ, ಗುರ್ಲಹೊಸುರ
ಕರೀಕಟ್ಟಿ ಹಾಗೂ ಇನಾಮಹೊಂಗಲ ಕ್ಲಸ್ಟರಗಳ 4 ಮತ್ತು 5
ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರು ಭಾಗವಹಿಸಿದ್ದರು.
ತರಬೇತಿಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ
ಹೆಚ್ಚಿಸುವಲ್ಲಿ ಕನ್ನಡ, ಗಣಿತ ಮತ್ತು ಪರಿಸರ ಅಧ್ಯಯನ
ವಿಷಯಗಳಿಗೆ ಸಂಬಂಧಿಸಿದಂತೆ ಸಾಮಥ್ರ್ಯಗಳು, ಕಲಿಕಾ
ಫಲಗಳು ಕಲಿಕಾ ಸಾಮಗ್ರಿಗಳು, ಟಿ.ಎಲ್.ಎಮ್. ಗಳ ಬಳಕೆ,
ಪಾಠಟಿಪ್ಪಣಿ, ಪಾಠಯೋಜನೆ ಹಾಗೂ ಶೈಕ್ಷಣಿಕ ತಂತ್ರಜ್ಞಾನ
ವಿಷಯಗಳಿಗೆ ಬಗೆಗಿನ ಸಮಗ್ರ ಮಾಹಿತಿ ನೀಡಲಾಯಿತು.
ತರಬೇತಿಯಲ್ಲಿ ಎನ್.ಎನ್. ಕಬ್ಬೂರ, ಆರ್.ಪಿ. ನಲವಡೆ, ಎಸ್.ಎಸ್.
ದೊಡವಾಡ ಮತ್ತು ಎ.ಎಸ್. ಬಿಜಾಪೂರ ಶಿಕ್ಷಕರು ಸಂಪನ್ಮೂಲ
ವ್ಯಕ್ತಿಗಳಾಗಿ ಭಾಗವಹಿಸಿದ್ದರು, ಸಿಆರ್‍ಪಿಗಳಾದ ಎಚ್.ಎಲ್.ನದಾಫ,
ಪ್ರಕಾಶ ಫರೀಟ ತರಬೇತಿ ಆಯೋಜಿಸಿದ್ದರು.

LEAVE A REPLY

Please enter your comment!
Please enter your name here