ಇಂದು ಶಿಕ್ಷಕರ ದಿನಾಚರಣೆ. ಅದೆಷ್ಟೋ ಜನರು ತಮ್ಮ ಗುರುವೃಂದವನ್ನು ನೆನಪಿಸಿಕೊಂಡು, ವಂದನೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳೂ ಹೊರತಲ್ಲ.
ಹಾಗೇ ಖ್ಯಾತ ನಟ ದರ್ಶನ್ ತೂಗುದೀಪ್ ಅವರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಟ್ವಿಟರ್ನಲ್ಲಿ ತಮ್ಮ ತಂದೆ-ತಾಯಿಯಾದ ತೂಗುದೀಪ್ ಶ್ರೀನಿವಾಸ್-ಮೀನಾ ತೂಗುದೀಪ್ ಮತ್ತು ರೆಬಲ್ಸ್ಟಾರ್ ಅಂಬರೀಷ್-ಸುಮಲತಾ ಅವರ ಫೋಟೋಗಳನ್ನು ಕೊಲ್ಯಾಜ್ ಮಾಡಿ ಪೋಸ್ಟ್ ಮಾಡಿ, ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ, ನಮ್ಮನ್ನು ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರುಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಬರೆದಿದ್ದಾರೆ.
ತಂದೆ-ತಾಯಿಯನ್ನು ಕಳೆದುಕೊಂಡಿರುವ ದರ್ಶನ್ ಸುಮಲತಾ-ಅಂಬರೀಷ್ ಕುಟುಂಬಕ್ಕೆ ತುಂಬ ಆಪ್ತರು. ಅಂಬರೀಷ್ ಅವರ ಮಾರ್ಗದರ್ಶನದಲ್ಲೇ ಬೆಳೆದವರು. ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ಕರೆಯುತ್ತಾರೆ . ಇದೀಗ ಶಿಕ್ಷಕರ ದಿನಾಚರಣೆಯಂದು ತನ್ನ ಅಪ್ಪ-ಅಮ್ಮನ ಫೋಟೋ ಜತೆ, ಸುಮಲತಾ-ಅಂಬರೀಷ್ ಫೋಟೋವನ್ನೂ ಹಾಕಿದ್ದಾರೆ. ಈ ಮೂಲಕ ಅವರಿಗೂ ಗುರುವಿನ ಸ್ಥಾನ ನೀಡಿದ್ದಾರೆ.