ಶಿರಾ-ರಾಜರಾಜೇಶ್ವರಿ ನಗರ ಕ್ಷೇತ್ರಗಳ ವಿ.ಸಭಾ ಕ್ಷೇತ್ರಗಳಿಗೆ ‘ಬೈ-ಎಲೆಕ್ಷನ್ ಡೇಟ್ ಫಿಕ್ಸ್ ‘: ಇಲ್ಲಿದೆ ಚುನಾವಣಾ ಪ್ರಕ್ರಿಯೆಯ ಮಾಹಿತಿ

0

ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಶಿರಾ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳನ್ನು ಸೇರಿದಂತೆ ನಾನಾ ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಹಾರದ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ನವೆಂಬರ್‌ 3 ರಂದು ನಡೆಸಲಿದ್ದು ನವೆಂಬರ್‌ 10 ರಂದು ಮತ ಎಣಿಕೆ ಜರುಗಲಿದೆ. ಆ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಿಲಾಗಿದ್ದು, ವಿವರ ಈ ಕೆಳಗಿನಂತಿದೆ:

ಸ್ಥಳೀಯ ಹಬ್ಬಗಳು, ಹವಾಮಾನ ಸ್ಥಿತಿಗತಿ ಸೇನಾಪಡೆಗಳ ಸಂಚಾರ, ಸಾಂಕ್ರಾಮಿಕ ಮತ್ತಿತರ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಆಯೋಗ ಈ ಕೆಳಕಂಡ ವೇಳಾಪಟ್ಟಿಯಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಉಪಚುನಾವಣೆಗಳನ್ನುನಡೆಸಲು ನಿರ್ಧರಿಸಿದೆ.

ಮೇಲೆ ತಿಳಿಸಿದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 01.01.2020ಕ್ಕೆ ಅನ್ವಯವಾಗುವಂತೆ ಅರ್ಹ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರ(ಇವಿಎಂ) ಮತ್ತು ವಿವಿಪ್ಯಾಟ್
ಈ ಮೇಲೆ ತಿಳಿಸಿದ ಕ್ಷೇತ್ರಗಳ ಉಪಚುನಾವಣೆಗಾಗಿ ಅಗತ್ಯ ಸಂಖ್ಯೆಯ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಒದಗಿಸಲಾಗಿದೆ.

ಮತದಾರರ ಗುರುತು ಪತ್ತೆ
ಮತದಾನದ ಸಮಯದಲ್ಲಿ ಉಪಚುನಾವಣೆಗೆ ಮತದಾರರ ಗುರುತು ಕಡ್ಡಾಯವಾಗಿದ್ದು, ಅದು ಈ ಮೊದಲು ಇದ್ದ ಪದ್ಧತಿಯಂತೆ ಮುಂದುವರಿಯಲಿದೆ. ಮತದಾರರ ಗುರುತಿನ ಚೀಟಿ(ಎಪಿಕ್) ಮತದಾರರ ಗುರುತು ಪತ್ತೆಗೆ ಪ್ರಮುಖ ದಾಖಲೆಯಾಗಿದೆ. ಆದರೂ ಯಾವುದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಅಂತಹವರು ಆತ/ಆಕೆ ತನ್ನ ಹಕ್ಕಿನಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಪರ್ಯಾಯ ಗುರುತಿನ ದಾಖಲೆಗಳನ್ನು ನಿಗದಿಪಡಿಸಲಾಗಿದೆ. ಅವುಗಳೆಂದರೆ:

ಆಧಾರ್ ಕಾರ್ಡ್
ಮನ್ರೇಗಾ ಉದ್ಯೋಗ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್/ಅಂಚೆ ಕಚೇರಿ ವಿತರಿಸಿರುವ ಛಾಯಾಚಿತ್ರವಿರುವ ಪಾಸ್ ಬುಕ್
ಕಾರ್ಮಿಕ ಸಚಿವಾಲಯ ತನ್ನ ಯೋಜನೆ ಅಡಿ ವಿತರಿಸಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
ಚಾಲನಾ ಪರವಾನಗಿ
ಪಾಸ್ ಪೋರ್ಟ್
ಉದ್ಯೋಗದಾತರು ನೀಡಿರುವ ಛಾಯಾಚಿತ್ರವಿರುವ ಸೇವಾ ಗುರುತಿನ ಚೀಟಿ
ಎನ್ ಪಿ ಆರ್ ಅಡಿಯಲ್ಲಿ ಆರ್ ಜಿಐ ವಿತರಿಸಿರುವ ಸ್ಮಾರ್ಟ್ ಕಾರ್ಡ್
ಛಾಯಾಚಿತ್ರವಿರುವ ಪಿಂಚಣಿ ದಾಖಲೆಗಳು
ಸಂಸದರು/ಶಾಸಕರು/ವಿಧಾನಪರಿಷತ್ ಸದಸ್ಯರಿಗೆ ವಿತರಿಸಿರುವ ಅಧಿಕೃತ ಗುರುತಿನ ಚೀಟಿಗಳು
ಮಾದರಿ ನೀತಿಸಂಹಿತೆ

ಯಾವ ವಿಧಾನಸಭಾ ಕ್ಷೇತ್ರದಲ್ಲಿ ಅಥವಾ ಯಾವ ಭಾಗದಲ್ಲಿ ಚುನಾವಣೆ ನಡೆಯುತ್ತದೋ ಅಂತಹ ಜಿಲ್ಲೆಗಳಲ್ಲಿ ಚುನಾವಣಾ ಮಾದರಿ ನೀತಿಸಂಹಿತೆ ತಕ್ಷಣದಿಂದ ಜಾರಿಗೆ ಬರಲಿದೆ. ಆಯೋಗದ ನಿರ್ದೇಶನ ಸಂಖ್ಯೆ 437/6/ಐಎನ್‌ಎಸ್ ಟಿ/2016-ಸಿಸಿಎಸ್ ದಿನಾಂಕ 29 ಜೂನ್ 2017(ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯ) ಭಾಗಶಃ ಮಾರ್ಪಾಡುಗಳನ್ನು ಸೇರ್ಪಡೆ ಮಾಡಲಾಗಿದೆ. ಚುನಾವಣಾ ಮಾದರಿ ನೀತಿಸಂಹಿತೆ ಸಂಬಂಧಿಸಿದ ಎಲ್ಲ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳಿಗೆ ಅನ್ವಯವಾಗಲಿದೆ. ಮಾದರಿ ನೀತಿಸಂಹಿತೆ ಕೇಂದ್ರ ಸರ್ಕಾರಕ್ಕೂ ಸಹ ಅನ್ವಯಿಸಲಿದೆ.

ಎಲ್ಲ ರಾಜಕೀಯ ಪಕ್ಷಗಳ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಎಲ್ಲ ಅಗತ್ಯ ಮಾಹಿತಿಗಳನ್ನು ತಮ್ಮನ್ನು ಆಯ್ಕೆ ಮಾಡುವ ಮತದಾರರಿಗೆ ನೀಡಬೇಕು. ಈ ಕುರಿತಂತೆ ದಿನಾಂಕ 6 ಮಾರ್ಚ್ 2020ರ ಪತ್ರ ಸಂಖ್ಯೆ 3/4/2020/ಎಸ್ ಡಿ ಆರ್/ಸಂಪುಟ-III ಮತ್ತು ಪತ್ರ ಸಂಖ್ಯೆ 3/4/2019/ಎಸ್ ಡಿ ಆರ್ /ಸಂಪುಟ- IV ದಿನಾಂಕ 16, ಸೆಪ್ಟೆಂಬರ್ 2020 ಈ ಚುನಾವಣೆಗಳಲ್ಲಿ ಪಾಲಿಸುವುದು ಕಡ್ಡಾಯವಾಗಿದೆ

ಹಿರಿಯ ನಾಗರಿಕರಿಗೆ(80 ವರ್ಷ ಮೇಲ್ಪಟ್ಟವರು) ಮತ್ತು ದಿವ್ಯಾಂಗರಿಗೆ ಅಂಚೆ ಮತ ಪತ್ರ ಒದಗಿಸುವುದು, ಚುನಾವಣಾ ವೆಚ್ಚ ನಿರ್ವಹಣೆ ಮತ್ತಿತರ ಸೂಚನೆಗಳು ಈ ಉಪಚುನಾವಣೆಗೆ ಅನ್ವಯವಾಗಲಿವೆ.

ಉಪಚುನಾವಣೆ ನಡೆಸುವ ವೇಳೆ ಕೋವಿಡ್-19 ಸಾಂಕ್ರಾಮಿಕ ತಡೆಗೆ ಕೈಗೊಳ್ಳಬೇಕಾಗಿರುವ ವಿಸ್ತೃತ ಮಾರ್ಗಸೂಚಿ
ಕೋವಿಡ್-19 ಹರಡುವ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಚುನಾವನಾ ಆಯೋಗ 2020ರ ಆಗಸ್ಟ್ 21ರಂದು ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚುನಾವಣೆ ವೇಳೆ ಆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅದರ ವಿವರಗಳು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಇಲ್ಲಿ ಅಡಕ-1ರಲ್ಲಿ ಲಗತ್ತಿಸಲಾಗಿದೆ.

LEAVE A REPLY

Please enter your comment!
Please enter your name here