ಶಿವಾನಂದ ಭಾರತಿ ನಗರದ 40 ಅಸಂಘಟಿತ ಕೂಲಿ ಕಾರ್ಮಿಕ ಕುಟುಂಬಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿ ಕರ್ನಾಟಕ ರಾಜ್ಯ ರೈತ ಹಿತ ರಕ್ಷಣಾ ವೇದಿಕೆ ಮನವಿ

0

ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪುರಸಭಾ ವ್ಯಾಪ್ತಿಯಲ್ಲಿ ಬರುವ ಶಿವಾನಂದ ಭಾರತಿ ನಗರದಲ್ಲಿ ಕಳೆದ 50 ವರ್ಷಗಳಿಂದ ವಾಸವಾಗಿರುವ ಅಸಂಘಟಿತ ಕೂಲಿ ಕಾರ್ಮಿಕರ ಕುಟುಂಬಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ವೇದಿಕೆಯ ಮಹಿಳಾ ಘಟಕ ಮನವಿ ಮಾಡಿಕೊಂಡಿತು. ಕಳೆದ 50 ವರ್ಷಗಳಿಂದ ದಿನ ನಿತ್ಯ ಕೂಲಿ ಮಾಡಿ 50 ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕ ಕುಟುಂಬಗಳು ಯಾವುದೇ ಸ್ವಂತ ಮನೆಯಿಲ್ಲದೆ ಜೋಪಡಿಗಳು ಹಾಗೂ ಗುಡಿಸಲುಗಳಲ್ಲಿ ವಾಸವಾಗಿವೆ. ಜನಪ್ರತಿನಿಧಿಗಳು ಪ್ರತಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತು ಕೊಟ್ಟು ಹೋಗುತ್ತಾರೆ ವಿನಃ ಇಲ್ಲಿಯವರೆಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಈ ಬಗ್ಗೆ ಸ್ಥಳೀಯ ಪುರಸಭಾ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇಂದು ರಾಜ್ಯ ಮಾಧ್ಯಮ ವಕ್ತಾರ ಬಸವರಾಜುರವರ ನೇತೃತ್ವದಲ್ಲಿ ಕರ್ನಾಟಕ ರೈತ ಹಿತರಕ್ಷಣಾ ಮಹಿಳಾ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು ವಂದನೆಗಳು.

ಶ್ರೀ ಬಸವರಾಜು. ಪತ್ರಕರ್ತರು

 

 

LEAVE A REPLY

Please enter your comment!
Please enter your name here