ಶೀಘ್ರ ವಾಸ್ತವ ನಿಯಂತ್ರಣ ರೇಖೆ ಬಳಿ ಅವಳಿ ಡುಬ್ಬಗಳ ಒಂಟೆ ಗಸ್ತು

0

ಶೀಘ್ರ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಗೆ ಯುದ್ಧ ಸಾಮಗ್ರಿ ಕೊಂಡೊಯ್ಯಲು, ಗಸ್ತು ತಿರುಗಲು 2 ಡುಬ್ಬಗಳ ಒಂಟೆಗಳನ್ನು ಬಳಸಿಕೊಳ್ಳಲು ಸೇನೆ ಮುಂದಾಗಿದೆ.

ಎತ್ತರದ ಶಿಖರಗಳಲ್ಲಿ ಇವು ಏಕಕಾಲಕ್ಕೆ 170 ಕೆ.ಜಿ. ತೂಕದ ಸಾಮಗ್ರಿಗಳನ್ನು ಒಯ್ಯಬಲ್ಲವು.ಲಡಾಖ್‌ನ ಪೂರ್ವ ಭಾಗದ ದೌಲತ್‌ಬಾಗ್‌ ಓಲ್ಡಿ ಮತ್ತು ಡೆಪ್ಸಾಂಗ್‌ನಲ್ಲಿ ಇವು ನಿಯೋಜನೆಗೊಳ್ಳಲಿವೆ.

ಅವಳಿ ಡುಬ್ಬಗಳ ಈ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆ ಎಂದೂ ಕರೆಯುತ್ತಾರೆ. ಮತ್ತು ಈ ಒಂಟೆಗಳು ಲಢಾಕ್ ನಲ್ಲಿ 12 ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ನುಬ್ರಾ ಕಣಿವೆ ಭಾಗಗಳಲ್ಲಿ ಕಾಣಸಿಗುತ್ತವೆ.

ಲಡಾಖ್‌ನ ಅವಳಿ ಡುಬ್ಬದ ಒಂಟೆಗಳು ಸಮರ್ಥವಾಗಿ ದುರ್ಗಮ ಬೆಟ್ಟಗಳನ್ನು ಹತ್ತಿಳಿಯುತ್ತವೆ ಎಂಬುದು ಡಿಆರ್‌ಡಿಒಯ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಈ ಭಾಗದಲ್ಲಿ ಚೀನಾ ಮತ್ತು ಭಾರತಗಳ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಈ ಸನ್ನಿವೇಶದಲ್ಲಿ 17ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ದೌಲತ್ ಬೇಗ್ ಓಲ್ಡೀ ಅಥವಾ ಡಿಬಿಒ ಮತ್ತು ಡೆಪ್ಸಾಂಗ್ ಪ್ರದೇಶಗಳಲ್ಲಿ ಈ ಒಂಟೆಗಳನ್ನು ಬಳಸಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿರುವುದು ಹಲವಾರು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.

ಮತ್ತು ಇವುಗಳ ಸಾಮರ್ಥ್ಯ ಹಾಗೂ ಕೌಶಲದ ಕುರಿತು ಲೇಹ್ ನಲ್ಲಿರುವ ಹೈ ಆಟ್ಯಿಟ್ಯೂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ.

LEAVE A REPLY

Please enter your comment!
Please enter your name here