ಶ್ರೀಕೆಂಪೇಶ್ವರ ಸ್ವಾಮಿ ಪ್ರಸಾದಪವ೯ ಸವ೯ಸಂಪನ್ನಃವಾಗಿ,ಧಾಮಿ೯ಕ ವಿಧಿ ವಿಧಾನದಂತೆ ಜರುಗಿತು

0

ಹಿರೇಹೆಗ್ಡಾಳ್:ಶ್ರೀಕೆಂಪೇಶ್ವರ ಸ್ವಾಮಿ ಪ್ರಸಾದಪವ೯ ಸಂಪನ್ನಃ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಹೆಗ್ಡಾಳ್ ಗ್ರಾಮದಲ್ಲಿ,ಶ್ರೀಕೆಂಪೇಶ್ವರ ಸ್ವಾಮಿ ಪ್ರಸಾದಪವ೯ ಸವ೯ಸಂಪನ್ನಃವಾಗಿ,ಧಾಮಿ೯ಕ ವಿಧಿ ವಿಧಾನದಂತೆ ಜರುಗಿತು.ಗ್ರಾಮದ ಅಂಚಿನಲ್ಲಿರುವ ಶ್ರೀಕೆಂಪೇಶ್ವರ ದೇವಸ್ಥಾನಕ್ಕೆ,ಗ್ರಾಮದ ಪ್ರತಿಯೊಂದು ಮನೆಯವರು ತಾವು ಮಾಡಿದ ಖಾಧ್ಯಗಳನ್ನು ಪ್ರಸಾದರೂಪದಲ್ಲಿ ಬುತ್ತಿ ತರುತ್ತಾರೆ.ಎಲ್ಲವನ್ನು ಒಂದು ಗೂಡಿಸಿ ದೇವರಿಗೆ ವಿಧಿವತ್ತಾಗಿ ಪೂಜೆಗೈದು ಎಡೆಯನ್ನಿಟ್ಟು, ನಂತರ ಎಲ್ಲಾ ಭಕ್ತರು ಸಾಮೂಹಿಕ ಪ್ರಸಾಧ ಸೇವೆನೆ ಮಾಡುತ್ತಾರೆ,ಇದನ್ನು ಸಾಮೂಹಿಕ ಭೋಜನವೆಂದೂ ಕರೆಯಬಹುದಾಗಿದೆ.ಹೆಚ್ಚುವರಿಯಾಗಿ ಉಳಿದ ಅನ್ನ ಆಹಾರ ಪ್ರಸಾದವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ಮನೆಗೆ ಕೊಂಡೊಯ್ಯುವ ಸಂಪ್ರದಾಯ ಇದೆ.ಶ್ರೀಕೆಂಪೇಶ್ವರ ಸ್ವಾಮಿಗೆ ಶ್ರಾವಣ ಪೂಜೆ ಹಾಗೂ ಸೋಮಶೇಖರ ಸ್ವಾಮೀಜಿಗಳ ಜನ್ಮದಿನವನ್ನು,ಪವ೯ಉತ್ಸವ ಆಚರಣೆ ಮೂಲಕ ಗ್ರಾಮಸ್ಥರು ಆಚರಿಸಿದರು.ಹೆಗ್ಡಾಳ್ ಗ್ರಾಮಸ್ಥರು,ಹಿರಯರು,ಮಕ್ಕಳು,ಮಹಿಳೆಯರು,ನೆರೆ ಹೊರೆ ಗ್ರಾಮಗಳ ಅಸಂಖ್ಯಾತ ಭಕ್ತರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

LEAVE A REPLY

Please enter your comment!
Please enter your name here