ಈಗಾಗಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಬೆನ್ನು ಹತ್ತಿರುವ ಕೊರೊನಾ ಇದೀಗ ಆರೋಗ್ಯ ಸಚಿವ ಬಿ. ಶ್ರೀರಾಮುಲುಗು ಅವರಿಗೂ ತಗುಲಿದೆ.
ಹೌದು, ಸಚಿವ ಬಿ ಶ್ರೀರಾಮುಲುಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದು, ಶ್ರೀರಾಮುಲು ಅವರು ಸರಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಜನರಿಗೆ ನೀಡುವ ಟ್ರೀಟ್ಮೆಂಟ್ ಸಚಿವರಿಗೂ ನೀಡಲಾಗುತ್ತಿದೆ. ಈಗ ಬೇಸಿಕ್ ಟೆಸ್ಟ್ ಗಳು ಮುಗಿದಿದೆ. ಟ್ರೀಟ್ ಮೆಂಟ್ ಈಗ ಶುರುವಾಗಿದೆ. ಸ್ವಲ್ಪ ಜ್ವರ ಮತ್ತು ಕೆಮ್ಮು ಇದೆ. ಯಾವುದೇ ಆತಂಕದ ಅಗತ್ಯ ಇಲ್ಲ ಎಂದು ಶ್ರೀರಾಮುಲು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಸಚಿವರು ಆಸ್ಪತ್ರೆಯಲ್ಲಿ ನೀಡುವ ಡಯಟ್ ಫುಡ್ ಸೇವಿಸಲಿದ್ದು , ವೈದ್ಯರ ಸಲಹೆಯಂತೆ ಆಹಾರ ತೆಗೆದುಕೊಳ್ಳಲಿದ್ದಾರೆ. .